ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಶವ ಹೂತುಹಾಕಿದ ಪ್ರಕರಣದ ದೂರುದಾರ, ಸಿ.ಎ. ಚಿನ್ನಯ್ಯ ಬಂಧನವನ್ನು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಸ್ವಾಗತಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಯ್ಯ ಬಂಧಿಸಿದ್ದು ಉತ್ತಮ ಬೆಳವಣಿಗೆ. ಕೇವಲ ಬಂಧನ ಮಾತ್ರವಲ್ಲ ಆತನನ್ನು ಮಂಪರು ಪರೀಕ್ಷೆಗೂ ಒಳಪಡಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಷಡ್ಯಂತ್ರಗಳ ಬಗ್ಗೆ ಎಸ್‌ಐಟಿಯವರೇ ಉತ್ತರ ಕೊಡುತ್ತಾರೆ. ಇಲ್ಲಿ ನನ್ನ ಹೆಸರೂ ಉಲ್ಲೇಖವಾಗುತ್ತಿದೆ. ಎಸ್‌ಐಟಿ ಕರೆದರೆ ನನಗೆ ಮತ್ತು ಆತನಿಗೆ ಏನು ಸಂಬಂಧ ಇದೆ ಎನ್ನುವುದನ್ನು ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.