ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನ. ಈ ದಿನದಂದು ಸಿಎಂ ಸಿದ್ದರಾಮಯ್ಯ ಖರ್ಗೆಯವರಿಗೆ ಆತ್ಮೀಯವಾಗಿ ಶುಭಾಶಯ ಕೋರಿದ್ದಾರೆ.
ನಾಡಿನ ಹಿರಿಯ ರಾಜಕಾರಣಿಗಳಾದ ಖರ್ಗೆ ಅವರಿಗೆ ಜನ್ಮದಿನದ ಶುಭಾಶಯಗಳು. ಸೈದ್ಧಾಂತಿಕ ಬದ್ಧತೆ, ರಾಜಕೀಯದ ಅನುಭವ ಹಾಗೂ ಜನಪರ ಕಾಳಜಿ ಇರುವ ನಿಮ್ಮ ಮುಂದಾಳತ್ವದಲ್ಲಿ ದೇಶ ಹಾಗೂ ಪಕ್ಷಗಳೆರಡು ಪ್ರಜ್ವಲಿಸಲಿ ಎಂದಿದ್ದಾರೆ.
ಆರೋಗ್ಯ ಭಾಗ್ಯ ನಿಮ್ಮದಾಗಲಿ, ದೀರ್ಘ ಆಯಸ್ಸನ್ನು ಭಗವಂತ ಕರುಣಿಸಲಿ ಎಂದು ಮನದುಂಬಿ ಹಾರೈಸುತ್ತೇನೆ ಎಂದು ಹೇಳಿದ್ದಾರೆ.