ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಘೋಷಿಸುವ ನೀಡುವ ಮೂಲಕ
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಎಲ್ಲಾ ಊಹಾಪೋಹಗಳಿಗೆ ಶನಿವಾರ ತೆರೆ ಎಳೆದಿದ್ದಾರೆ.
ಸ್ವತಂತ್ರ ಸ್ಪರ್ಧೆಯ ಬಗ್ಗೆ ಅವರು ಶನಿವಾರ ಸಾಮಾಜಿಕ ಮಾಧ್ಯಮ ಎಕ್ಸ್ನ ಪೋಸ್ಟ್ನಲ್ಲಿ ಬರೆದುಕೊಂಡಿದ್ದು, ಬಿಎಸ್ಪಿ ತನ್ನ ಸ್ವಂತ ಬಲದ ಮೇಲೆ ಸಂಪೂರ್ಣ ಸಿದ್ಧತೆ, ಬದ್ಧತೆಯೊಂದಿಗೆ ಲೋಕಸಭಾ ಚುನಾವಣೆ ಎದುರಿಸಲಿದೆ.
ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಮೈತ್ರಿ ಅಥವಾ ತೃತೀಯ ರಂಗ ರಚನೆಯ ಬಗ್ಗೆ ವದಂತಿಗಳನ್ನು ಹರಡುವುದು ತಪ್ಪು. ಇಂತಹ ಕಿಡಿಗೇಡಿ ಸುದ್ದಿಗಳನ್ನು ನೀಡಿ ಮಾಧ್ಯಮಗಳು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳಬಾರದು. ಜನರೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.