ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ ಅವರ ಪತ್ನಿ ಆಶಾ ಪಾಟೀಲ್ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ.
ಹ್ಯಾಕರ‍್ಸ್ ನಾನಾ ಪೋಸ್ಟ್‌ಗಳನ್ನು ಮಾಡುತ್ತಿದ್ದು, ಬಾಕ್ಸಿಂಗ್ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಆಶಾ ಪಾಟೀಲರ ಆಪ್ತ ಸಹಾಯಕ ರವಿಶಂಕರ್ ಎನ್‌ಪಿಯ ಫೇಸ್‌ಬುಕ್ ಅಕೌಂಟ್‌ಗೆ ಆಶಾ ಪಾಟೀಲ್ ಪೇಜ್ ಆಡ್ ಮಾಡಲಾಗಿತ್ತು. ಇದನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ.
ಲಾಗ್‌ಇನ್ ಪಾಸ್‌ವರ್ಡ್ ಬದಲಾಯಿಸಿದರೂ ಹ್ಯಾಕರ‍್ಸ್ ಬೇರೆ ಬೇರೆ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ವಿಜಯನಗರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.