ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ MBBS ಸೀಟ್: ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022-23 ಶೈಕ್ಷಣಿಕ ವರ್ಷಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಕುಟುಂಬಸ್ಥರಿಗೆ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಲ್ಲಿ ಮೀಸಲಾತಿ ಕೋಟಾ ಇರಿಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (MHA) ನಿರ್ಧರಿಸಿದೆ.

ಅಧಿಕೃತ ಅಧಿಸೂಚನೆಯ ಪ್ರಕಾರ 2022-23ರ ಶೈಕ್ಷಣಿಕ ವರ್ಷಕ್ಕೆ ಕೇಂದ್ರೀಯ ಪೂಲ್‌ನಿಂದ ಭಯೋತ್ಪಾದಕರ ಸಂತ್ರಸ್ತರ ಸಂಗಾತಿ ಮತ್ತು ಮಕ್ಕಳಿಗೆ ಸೀಟುಗಳನ್ನು ಹಂಚಲಾಗುತ್ತದೆ.

ಈ ಅಧಿಸೂಚನೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಸರ್ಕಾರವೂ ಒಪ್ಪಿಗೆ ನೀಡಿದೆ.

ಭಯೋತ್ಪಾದಕರಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳು, ಭಯೋತ್ಪಾದಕರು ಮತ್ತು ಭಯೋತ್ಪಾದಕ ಕಾರ್ಯಾಚರಣೆಗಳಿಂದ ಉಂಟಾದ ಶಾಶ್ವತ ಅಂಗವೈಕಲ್ಯ ಮತ್ತು ಗಂಭೀರವಾಗಿ ಗಾಯಗೊಂಡ ಸಂತ್ರಸ್ತರ ಮಕ್ಕಳು, ಸಂಬಂಧಿಕರಿಗೆ ಮೀಸಲಾತಿಯಲ್ಲಿ ಆದ್ಯತೆ ನೀಡಲಾಗುತ್ತದೆ.

ಅರ್ಹತಾ ಮಾನದಂಡಗಳು ಕೇಂದ್ರಾಡಳಿತ ಪ್ರದೇಶದ (UT) ಖಾಯಂ ನಿವಾಸಿಗಳ ಮಕ್ಕಳು, ಕೇಂದ್ರ/ಇತರ ರಾಜ್ಯಗಳು/UT ಸರ್ಕಾರದ ಉದ್ಯೋಗಿಗಳು, ರಾಜ್ಯ/UT ಗೆ ಡೆಪ್ಯೂಟೇಶನ್‌ನಲ್ಲಿನ ಉದ್ಯೋಗಿಗಳು , ಇತರ ರಾಜ್ಯಗಳು/UT ಸರ್ಕಾರಗಳಿಗೆ ಪೋಸ್ಟ್ ಮಾಡಲ್ಪಟ್ಟ ಮತ್ತು ರಾಜ್ಯ/UT ಒಳಗೆ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದವರ ಕುಟುಂಬಗಳಿಗೆ ಅನ್ವಯಿಸುತ್ತವೆ.

ಅಭ್ಯರ್ಥಿಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ/ಜೈವಿಕ ತಂತ್ರಜ್ಞಾನದಂತಹ ವಿಷಯಗಳಲ್ಲಿ ಪ್ರತ್ಯೇಕವಾಗಿ ಕನಿಷ್ಠ 50 ಪ್ರತಿಶತ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.ಎಸ್‌ಸಿ, ಎಸ್‌ಟಿ, ಒಎಸ್‌ಸಿ, ಒಬಿಸಿ ಮತ್ತು ಪಿಡಬ್ಲ್ಯೂಡಿಗೆ ಶೇಕಡ 40 ಮತ್ತು ಸಾಮಾನ್ಯ ವರ್ಗಕ್ಕೆ ಸೇರುವ ಅಂಗವಿಕಲರಿಗೆ ಶೇ 4. ನಿಗದಿಪಡಿಸಲಾಗಿದೆ.

MBBS/BDS ಕೋರ್ಸ್‌ಗಳಲ್ಲಿ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆಯನ್ನು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2022 ರಲ್ಲಿ ಪಡೆದ ಶ್ರೇಣಿಯ ಆಧಾರದ ಮೇಲೆ ಮಾಡಲಾಗುತ್ತದೆ.J&K ನ UT ಅನುಸರಿಸುತ್ತಿರುವ ಮೀಸಲಾತಿ ನೀತಿಯು MBBS ಮತ್ತು BDS ಸೀಟುಗಳ ಕೇಂದ್ರೀಯ ಪೂಲ್‌ಗೆ ಅನ್ವಯಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!