ಅತ್ತ 18 ಬಿಜೆಪಿ ಶಾಸಕರ ಅಮಾನತು: ಇತ್ತ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲು ಮಸೂದೆ ಅಂಗೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಗದ್ದಲ ನಡುವೆ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ‌ ನೀಡುವ ಮಸೂದೆ ಯಾವುದೇ ಚರ್ಚೆ ಇಲ್ಲದೆ ಶುಕ್ರವಾರ ಅಂಗೀಕಾರವಾಗಿದೆ.

ಬಿಜೆಪಿ ಸದಸ್ಯರು ವಿಧಾನಸಭೆಯ ಬಾವಿಗಿಳಿದು,ಸ್ಪೀಕರ್ ಪೀಠದತ್ತ ಮಸೂದೆ ಪ್ರತಿಗಳನ್ನು ಹರಿದು ಎಸೆದರು. ಇದರಿಂದ ಸ್ಪೀಕರ್ ಯು. ಟಿ. ಖಾದರ್ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಪಡಿಸಿ, ಅವರನ್ನು ವಿಧಾನಸಭೆಯಿಂದ ಹೊರಹಾಕಲು ಮಾರ್ಷಲ್ ಗಳಿಗೆ ನಿರ್ದೇಶಿಸಿದರು.

ಇತ್ತ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ, ವಿರೋಧ, ಗದ್ದಲದ ನಡುವೆ ಮುಸ್ಲಿಂರಿಗೆ 2 ಕೋಟಿ ರೂ. ವರೆಗಿನ ಸರ್ಕಾರಿ ಗುತ್ತಿಗೆ ಕಾಮಗಾರಿಗಳು ಹಾಗೂ ₹1 ಕೋಟಿ ವರೆಗೆ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ( ತಿದ್ದುಪಡಿ) ವಿಧೇಯಕ ಅಂಗೀಕಾರವಾಯಿತು.

ಮಾರ್ಚ್ 7 ರಂದು ಸಿದ್ದರಾಮಯ್ಯ ಮಂಡಿಸಿದ 2025-26ರ ಬಜೆಟ್ ನಲ್ಲಿ ಇದನ್ನು ಘೋಷಿಸಲಾಗಿತ್ತು.

ಈಗಾಗಲೇ ಬಜೆಟ್‌ನಲ್ಲಿ ಗುತ್ತಿಗೆ ಮೀಸಲಾತಿಯನ್ನು ಎಸ್‌ಸಿ-ಎಸ್‌ಟಿ, ಪ್ರವರ್ಗ 1, 2aಗಳ ಜೊತೆಗೆ 2b ಮುಸ್ಲಿಂ ವರ್ಗವನ್ನೂ ಸೇರಿಸಿ ಗುತ್ತಿಗೆ ಮೊತ್ತವನ್ನು 1 ಕೋಟಿಯಿಂದ 2 ಕೋಟಿ ರೂಗೆ ಏರಿಸುವ ಪ್ರಸ್ತಾಪ ಮಾಡಲಾಗಿತ್ತು. ಇಂದು ಮಂಡನೆಯಾದ ಬಿಲ್‌ನಲ್ಲಿ 2b ವರ್ಗಕ್ಕೆ ಶೇ.4 ಮೀಸಲಾತಿ ಕೊಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (KTTP) ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ರೆ ಎರಡು ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!