ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧ ನಿಲ್ಲಿಸಲು ಸತತ ಪ್ರಯತ್ನ ಮಾಡುತ್ತಿರುವ ನಡುವೆ ರಷ್ಯಾ ಉಕ್ರೇನ್‌ನಾದ್ಯಂತ ಡ್ರೋನ್ ದಾಳಿ ನಡೆಸಿದೆ.
ಅಮೆರಿಕ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಳ್ಳುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಕದನ ವಿರಾಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾದಲ್ಲಿ ಮಾತುಕತೆ ನಡೆಯುತ್ತಿದೆ.
ಆದ್ರೆ ಇತ್ತ ಭಾನುವಾರ ತಡರಾತ್ರಿ ರಷ್ಯಾ ಸೇನೆ ಏಕಾಏಕಿ 147 ಡ್ರೋನ್‌ಗಳಿಂದ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಭೀಕರ ದಾಳಿಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಕೈವ್‌ನಲ್ಲಿ 5 ವರ್ಷದ ಮಗು ಸೇರಿ ಮೂವರು, ಡೊನೆಕ್ಸ್ಟ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಉಕ್ರೇನ್‌ನ ಕೈವ್, ಸುಮಿ, ಚೆರ್ನಿಹಿವ್, ಒಡೆಸಾ, ಡೊನೆಕ್ಸ್ಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೂಲ ಸೌಕರ್ಯಗಳು, ಕಟ್ಟಡಗಳು ಹಾನಿಯಾಗಿವೆ. ರಷ್ಯಾ ಸುಮಾರು 147 ಡ್ರೋನ್‌ಗಳನ್ನು ಉಡಾವಣೆ ಮಾಡಿತ್ತು. ಈ ಪೈಕಿ 97 ಡ್ರೋನ್‌ಗಳನ್ನು ಉಕ್ರೇನ್ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ.