ಇತ್ತ ಸ್ಟೆಲ್ತ್ ಫೈಟರ್ ಜೆಟ್‌ಗೆ ಭಾರತ ಅನುಮೋದನೆ.. ಅತ್ತ ಪಾಕ್ ಗೆ ಫೈಟರ್ ಜೆಟ್‌ ಪೂರೈಸಲು ಬಿಗ್ ಡೀಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತವು ತನ್ನದೇ ಆದ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಚೀನಾ ದೇಶವು ಪಾಕಿಸ್ತಾನಕ್ಕೆ 40 ಜೆ-35 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲಿದೆ ಎಂದು ಹೇಳಲಾಗಿದೆ.

5ನೇ ತಲೆಮಾರಿನ ಸ್ಟೆಲ್ತ್‌ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಕೆಲ ದಿನಗಳ ಹಿಂದೆಯಷ್ಟೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅನುಮೋದನೆ ನೀಡಿದ್ದರು. ಇದು ಅವಳಿ-ಎಂಜಿನ್ ಹೊಂದಿರುವ 5ನೇ ತಲೆಮಾರಿನ ಮಿಲಿಟರಿ ವಿಮಾನವಾಗಿದೆ. ಆದ್ರೆ ಸ್ಟೆಲ್ತ್ ವಿಮಾನ-ಅಡ್ವಾನ್ಡ್‌ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ಅನ್ನು ವಾಯುಪಡೆಗೆ ಸೇರಿಸಿಕೊಳ್ಳಲು ಕನಿಷ್ಠ 1 ದಶಕಗಳ ಕಾಲ ಸಮಯ ಬೇಕಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದ್ರೆ ಎಎಂಸಿಎ 2035ರ ವೇಳೆಗೆ ಭಾರತ ಸ್ಟೆಲ್ತ್‌ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆ ಪೂರ್ಣಗೊಳ್ಳಲಿದೆ.

ಈ ಹೊತ್ತಿನಲ್ಲೇ ಚೀನಾ, ಪಾಕಿಸ್ತಾನಕ್ಕೆ 40 ಸ್ಟೆಲ್ತ್‌ ಫೈಟರ್‌ ಜೆಟ್‌ಗಳನ್ನು ಪೂರೈಸಲು ಮುಂದಾಗಿದೆ. ಚೀನಾದಲ್ಲಿ ಪಾಕಿಸ್ತಾನಿ ಫೈಟರ್‌ ಪೈಲಟ್‌ಗಳಿಗೆ ಈಗಾಗಲೇ ಸ್ಟೆಲ್ತ್‌ ಜೆಟ್‌ಗಳ ತರಬೇತಿ ನೀಡುತ್ತಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!