January 30, 2026
Friday, January 30, 2026
spot_img

ಅತ್ತ ಐಟಿ ದಾಳಿ….ಇತ್ತ ಸಿಜೆ ರಾಯ್ ದುರಂತ ಅಂತ್ಯ: ಸಾವಿನ ಸುತ್ತ ಅನುಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಶ್ರೀಮಂತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ದುರಂತ ಅಂತ್ಯಕಂಡಿದ್ದಾರೆ. ಇಂದು ಬೆಂಗಳೂರಿನ ಲ್ಯಾಂಗ್‌ಫೋರ್ಡ್‌ನಲ್ಲಿರುವ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಐಟಿ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್ ಮೇಲೆ ದಾಳಿ ಮಾಡಿದ್ದರು. ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳು, ಸೆಜಿ ರಾಯ್ ಫಾರ್ಮ್ ಹೌಸ್ ಸೇರಿದಂತೆ ಹಲೆವೆಡೆ ದಾಳಿಯಾಗಿತ್ತು. ಇದರ ನಡುವೆ ಅಧಿಕಾರಿಗಳ ಶೋಧ ಕಾರ್ಯದ ನಡುವೆ ಕಚೇರಿಗೆ ಆಗಮಿಸಿದ ಸೆಜೆ ರಾಯ್ ವಿಚಾರಣೆ ಮಾಡಿದ್ದಾರೆ. ಕೆಲ ದಾಖಲೆ ತರಲು ಕೋಣೆಯೊಳಗೆ ಹೋದ ಸೆಜೆ ರಾಯ್ ಎದೆಗೆ ಗುಂಡು ಹಾರಿಸಿ ದುರಂತ ಅಂತ್ಯಕಂಡಿದ್ದಾರೆ.

ಸಿಜೆ ರಾಯ್ ಲ್ಯಾಂಗ್‌ಫೋರ್ಡ್‌ನಲ್ಲಿ ಐಟಿ ಅಧಿಕಾರಿಗಳ ಮುಂದೆ ಸತತ ಒಂದು ಗಂಟೆ ವಿಚಾರಣೆ ಎದುರಿಸಿದ್ದರು. ವ್ಯಾವಹಾರಗಳ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಐಟಿ ಅಧಿಕಾರಿಗಳು ಕೇಳಿದ ಹಲವು ದಾಖಲೆಗಳನ್ನು ಸಿಜೆ ರಾಯ್ ನೀಡಿದ್ದಾರೆ. ಈ ವೇಳೆ ಕೆಲ ಪ್ರಶ್ನೆಗಳಿಗೆ ನೀಡಿದ್ದ ಉತ್ತರಕ್ಕೆ ಪೂರಕ ದಾಖಲೆಗಳ ಬಗ್ಗೆ ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ದಾಖಲೆ ತರುವುದಾಗಿ ಹೇಳಿ ಕೋಣೆಯೊಳಕ್ಕೆ ಹೋದ ಸೆಜೆ ರಾಯ್, ತಮ್ಮ ರಿವಾಲ್ವರ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣವೇ ಕಚೇರಿ ಸಿಬ್ಬಂದಿಗಳು ಸಿಜೆ ರಾಯ್ ಅವರನ್ನು HSR ಲೇಔಟ್ ನ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ತಲುಪುವ ಮುನ್ನ ಸಿಜೆ ರಾಯ್ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತೇದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದಂಡೆ ಸಿಜೆ ರಾಯ್ ಅವರ ವ್ಯವಹಾರ ಹಾಗೂ ಹಣದ ಟ್ರಾನ್ಸಾಕ್ಷನ್ ಮೇಲೆ ಹಲವು ಅನುಮಾನಗಳಿದ್ದರೆ, ಇದೇ ರೀತಿ ಆರೋಪಗಳು, ಸವಾಲುಗಳು ಹಿಂದೆಯೂ ಎದುರಿಸಿದ್ದರು. ಹೀಗಾಗಿ ಈ ಬಾರಿ ದುರಂತ ಅಂತ್ಯಕಾಣಲು ಕಾರಣವೇನು ಅನ್ನೋದು ಭಾರಿ ಚರ್ಚೆಯಾಗುತ್ತಿದೆ.

ಸಿಜೆ ರಾಯ್ ದುರಂತ ಅಂತ್ಯ ಮಾಹಿತಿ ಸಿಗುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ, ಅಂತಸ್ತು ಮಾಡಿರುವ ಸಿಜೆ ರಾಯ್ ದುರಂತ ಅಂತ್ಯಕಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !