April 11, 2026
Saturday, April 11, 2026
spot_img

ಅತ್ತ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಇತ್ತ ಲೆಬನಾನ್‌ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಕದನನಕ್ಕೆ ಪೂರ್ಣ ವಿರಾಮ ನೀಡಲು ಅಮೆರಿಕ -ಇರಾನ್ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ ನಡೆಸುತ್ತಿದ್ದರೆ , ಇತ್ತ ಇಸ್ರೇಲ್, ಲೆಬನಾನ್‌ ಮೇಲೆ ದಾಳಿ ಮುಂದುವರಿಸಿರುವುದಾಗಿ ಗುಡುಗಿದೆ.

ಈ ಕುರಿತು ಮಾಹಿತಿ ನೀಡಿದ ಇಸ್ರೇಲ್ ಸೇನೆ, ಕಳೆದ 24 ಗಂಟೆಗಳಲ್ಲಿ ಲೆಬನಾನ್‌ನಲ್ಲಿರುವ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ ಮೂಲಸೌಕರ್ಯವನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.

ಇತ್ತ ಯುಎಸ್ ನಡುವಿನ ಮಾತುಕತೆಯಲ್ಲಿ ಹೆಜ್ಬೊಲ್ಲಾ ಮೇಲೆ ಇಸ್ರೇಲಿ ದಾಳಿಗಳನ್ನು ನಿಲ್ಲಿಸಲು ಟೆಹ್ರಾನ್ ಒತ್ತಾಯಿಸುತ್ತಿದ್ದಂತೆ ಈ ಹೇಳಿಕೆ ಬಂದಿದೆ.

ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್ ಸೇನೆಯಿಂದ ನಿರಂತರ ಡ್ರೋನ್ ಮತ್ತು ರಾಕೆಟ್ ಗಳ ದಾಳಿ ನಡೆಯುತ್ತಲ್ಲೇ ಇದ್ದು, ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !