ಹೊಸದಿಗಂತ ಡಿಜಿಟಲ್ ಡೆಸ್ಕ್:
2 ಕೋಟಿ ರೂ. ಮೌಲ್ಯದ ಕೊಡೈನ್ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ರಾಜಸ್ಥಾನದ 48 ವರ್ಷದ ಮೆಡಿಕಲ್ ಸೇಲ್ಸ್ ರೆಪ್ವೋರ್ವನನ್ನು ಮಹಾರಾಷ್ಟ್ರದ ಥಾಣೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಖರ ಮೂಲಗಳ ಮಾಹಿತಿ ಆಧಾರದ ಮೇರೆಗೆ ಮೇ 9ರಂದು ಆಂಟಿ ನಾರ್ಕೊಟಿಕ್ ಸೆಲ್ ಥಾಣೆ ರೈಲ್ವೆ ನಿಲ್ದಾಣದ ಬಳಿ ಹೋಟೆಲ್ವೊಂದರ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಆರೋಪಿ ಸುರೇಶ್ ಪರ್ಮಾರ್ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಈತನ ಬಳಿಕ 1 ಕೋಟಿ ಮೌಲ್ಯದ ಕೊಡೈನ್ ಡ್ರಗ್ಸ್ ಪೌಡರ್ ರೂಪದಲ್ಲಿ ಸಿಕ್ಕಿದೆ. ಅಲ್ಲದೆ, ಜೋಧ್‌ಪುರದಿಂದ ಕೊರಿಯರ್ ಮೂಲಕ ಪರ್ಮಾರ್ ಈ ಮಾದಕ ದ್ರವ್ಯವನ್ನು ಪಡೆದಿದ್ದು, ಅಧಿಕಾರಿಗಳು ಸದ್ಯ ಆತನ ಬಳಿ ಇದ್ದ 2 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ಧಾರೆ.