ಹೊಸದಿಗಂತ ವರದಿ ತುಮಕೂರು:
ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಬುಧವಾರದಿಂದ ಹಾವು ಕಚ್ಚಿ ಮೃತರಾಗಿರುವ ದುರ್ಘಟನೆಯು ಹೆಗ್ಗೆರೆಯಲ್ಲಿ ನಡೆದಿದೆ.
ಸದರಿ ವಿದ್ಯಾರ್ಥಿಯು ಘಟಿಕೋತ್ಸವ ಮುಗಿಸಿಕೊಂಡು ತನ್ನ ಫ್ಲಾಟ್ ಬಳಿ ಕಾರು ನಿಲ್ಲಿಸಿ ಇಳಿಯುವ ಸಂದರ್ಭ ಹಾವು ಕಚ್ಟಿದೆ. ಅದನ್ನು ಗಮನಿಸದೆ ವಿದ್ಯಾರ್ಥಿ ಫ್ಲಾಟ್ ಗೆ ತೆರಳಿ ಕುಸಿದು ಬಿದ್ದಿದ್ದಾರೆ. ಸಹಪಾಠಿ ಕೂಡಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ,ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.