ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳದ ದುರ್ಗಾಪುರದಲ್ಲಿ ಒಡಿಶಾ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈಗಾಗಲೇ 3 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಈಗ ಆರೋಪಿಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಸನ್ಸೋಲ್-ದುರ್ಗಾಪುರ ಪೊಲೀಸ್ ಆಯುಕ್ತ ಅಭಿಶೇಖ್ ಗುಪ್ತಾ ‘ಇನ್ನೂ ಇಬ್ಬರನ್ನು ಬಂಧಿಸಲಾಗಿದೆ. ಇವರೊಂದಿಗೆ, ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಎಲ್ಲಾ ಐವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ಈ ಹಿಂದೆ ಬಂಧಿಸಲಾದ ಮೂವರು ಆರೋಪಿಗಳನ್ನು ಭಾನುವಾರ ದುರ್ಗಾಪುರ ಉಪ-ವಿಭಾಗೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಅ.10ರ ರಾತ್ರಿ ಸುಮಾರು 8 ರಿಂದ 8:45ರ ವೇಳೆಗೆ ಈ ಘಟನೆ ನಡೆದ್ದಿದ್ದು, ಆರೋಪಿಯು ಆಕೆಗೆ ಸದ್ದಿಲ್ಲದೆ ಹೋಗಲು 5,000 ರೂ. ನೀಡುವುದಾಗಿ ಹೇಳಿದ್ದಾನೆ ಎಂಬದಾಗಿ ತಿಳಿದಿದೆ. ಅಲ್ಲದೇ ವಿದ್ಯಾರ್ಥಿನಿ ಜೊತೆಗಿದ್ದ ಆಕೆಯ ಸ್ನೇಹಿತನನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಘಟನೆಯ ರಾತ್ರಿ ಆತನ ಚಲನವಲನಗಳು ಮತ್ತು ನಡವಳಿಕೆ ಅನುಮಾನಕ್ಕೆ ಕಾರಣವಾಗಿದ್ದು, ಆತ ಪರಾರಿಯಾಗಿದ್ದ ನಂತರ ಇತರ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಲಿಲ್ಲ ಅಥವಾ ಕಾಲೇಜಿನಿಂದ ಸಹಾಯ ಪಡೆಯಲಿಲ್ಲ ಏಕೆ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿನೆ ನಡೆಸುತ್ತಿದ್ದಾರೆ.

