ವೈದ್ಯಕೀಯ ವಿದ್ಯಾರ್ಥಿನಿ ಮರ್ಡರ್‌, ಆಕೆ ಕಣ್ಣಿಂದ ರಕ್ತ ಬಂದಿದ್ಯಾಕೆ? ಆಟಾಪ್ಸಿ ರಿಪೋರ್ಟ್‌ನಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆಗೆ ಸಂಬಂಧಿಸಿದಂತೆ ಇನ್ನಷ್ಟು ವಿಷಯಗಳು ಹೊರಬಿದ್ದಿವೆ.

ವೈದ್ಯೆಯ ಕಣ್ಣು ಹಾಗೂ ಬಾಯಿಯಿಂದ ರಕ್ತ ಸೋರಿತ್ತು, ಆದರೆ ಯಾಕೆ ಎನ್ನುವ ಮಾಹಿತಿ ಆಟಾಪ್ಸಿ ಇಂದ ಹೊರಬಿದ್ದಿದೆ. ವೈದ್ಯೆಯ ಹತ್ಯೆ ಹಾಗೂ ಅತ್ಯಾಚಾರ ಮಾಡಿದ ಆರೋಪಿ ಸಂಜೋಯ್‌ ರಾಯ್‌ ಆಕೆಯ ಕನ್ನಡಕಕ್ಕೆ ಜೋರಾಗಿ ಗುದ್ದಿದ್ದು, ಕನ್ನಡಕ ಒಡೆದು ಅದರ ಗಾಜು ಕಣ್ಣಿಗೆ ಹೊಕ್ಕಿದೆ ಇದರಿಂದಾಗಿ ಕಣ್ಣಿನಿಂದ ರಕ್ತ ಬಂದಿದೆ.

ಬಾಯಿಯಿಂದ ರಕ್ತಸ್ರಾವವಾಗಿದ್ದು, ಮುಖದ ಮೇಲೂ ಗಾಯಗಳಾಗಿದ್ದವು, ಸಂತ್ರಸ್ತೆಯ ಖಾಸಗಿ ಭಾಗಗಳಲ್ಲೂ ರಕ್ತಸ್ರಾವವಾಗಿತ್ತು, ಹೊಟ್ಟೆ, ಎಡಗಾಲು, ಉಂಗುರದ ಬೆರಳು ಮತ್ತು ತುಟಿಗಳಲ್ಲಿ ಗಾಯಗಳಾಗಿದ್ದವು. ಶುಕ್ರವಾರ ಬೆಳಗ್ಗೆ ಪಶ್ಚಿಮ ಬಂಗಾಳದ ಸರ್ಕಾರಿ ಸ್ವಾಮ್ಯದ ಆರ್​ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಆಸ್ಪತ್ರೆ ಆವರಣಕ್ಕೆ ಆಗಾಗ ಬರುತ್ತಿದ್ದ ಸಂಜಯ್ ರಾಯ್ ಎಂಬಾತನನ್ನು ಶನಿವಾರ ಬಂಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!