ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.30 ರಂದು ದರ್ಶನ್ ಅವರಿಗೆ ಆರು ವಾರಗಳ ಜಾಮೀನು ನೀಡಲಾಗಿದೆ. ಐದು ತಿಂಗಳ ಸೆರೆವಾಸ ಮುಗಿಸಿ ಮನೆಗೆ ಮರಳಿದ ಮಗನನ್ನು ಭೇಟಿ ಮಾಡಲು ಮೀನಾ ತೂಗುದೀಪ ಆಗಮಿಸಿದ್ದಾರೆ.
ವಿಜಯಲಕ್ಷ್ಮಿ ವಾಸವಿರುವ ಹೊಸಕೆರೆಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಮೊಮ್ಮಗ ಚಂದನ್ ಜೊತೆಗೆ ಮಗನನ್ನು ಭೇಟಿ ಮಾಡಲು ಆಗಮಿಸಿದ್ದಾರೆ.
ಮೊಮ್ಮಗ ವಿನೀಶ್ ಹುಟ್ಟುಹಬ್ಬದಂದು, ದೀಪಾವಳಿ ಹುಟ್ಟುಹಬ್ಬದಂದು ಮಗ ದರ್ಶನ್ ಅವರನ್ನು ನೋಡಿ ಮೀನಾ ಖುಷಿಯಾಗಿದ್ದಾರೆ. ಇದೇ ವೇಳೆ ಅಪಾರ್ಟ್‌ಮೆಂಟ್ ಬಳಿ ಅಪಾರ ಅಭಿಮಾನಿಗಳು ನಟನನ್ನು ನೋಡಲು ಜಮಾಯಿಸಿದ್ದಾರೆ.