ರಾಜ್ಯದ ಮೊದಲ ಮಹಿಳಾ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಇಂದು ಅಧಿಕಾರ ಸ್ವೀಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಸರ್ಕಾರ ಮೀನಾಕ್ಷಿ ನೇಗಿ ಅವರನ್ನು ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ, ಅರಣ್ಯ ಪಡೆ ಮುಖ್ಯಸ್ಥೆಯಾಗಿ ನೇಮಿಸಿ ಆದೇಶ ಹೊರಡಿಸಿದೆ. ಅವರು ಪ್ರಸ್ತುತ ದೇಶದ ಎರಡನೇ ಮಹಿಳಾ ಪಿಸಿಸಿಎಫ್ ಆಗಿದ್ದಾರೆ. ಮಹಾರಾಷ್ಟ್ರದ ಪಿಸಿಸಿಎಫ್, ಹೆಚ್ ಒಎಫ್ ಎಫ್ ಶೋಮಿತಾ ಬಿಸ್ವಾಸ್ ಮೊದಲನೆಯವರಾಗಿದ್ದಾರೆ.

ದೇಶವು ಈ ಹಿಂದೆ ಅಸ್ಸಾಂ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಅನೇಕ ಮಹಿಳಾ ಪಿಸಿಸಿಎಫ್ ಗಳನ್ನು ಕಂಡಿದೆ. ಕರ್ನಾಟಕಕ್ಕೆ ಮೀನಾಕ್ಷಿ ನೇಗಿ ಮೊದಲನೆಯವರಾಗಿದ್ದಾರೆ.

ಮೀನಾಕ್ಷಿ ನೇಗಿಯವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಆದ್ಯತೆಯ ಪಟ್ಟಿಯಲ್ಲಿ ಯಾವುದು ಅಗ್ರಸ್ಥಾನ ಎಂದು ಕೇಳಿದಾಗ, ನನ್ನ ಪಟ್ಟಿಯಲ್ಲಿ ನಾನು ಮಾಡಲು ಬಯಸುವ ಹಲವಾರು ಕೆಲಸಗಳಿವೆ. ನಾನು ಮೊದಲು ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಕೆಲಸ ಮಾಡಲು ಪ್ರಾರಂಭಿಸುತ್ತೇನೆ. ಅನೇಕ ವಿಷಯಗಳನ್ನು ಯೋಜಿಸಿದ್ದೇನೆ ಎಂದರು.

ಕಳೆದ ಫೆಬ್ರವರಿ 18 ರವರೆಗೆ, ಮೀನಾಕ್ಷಿ ನೇಗಿಯವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರು. 1989 ರ ಬ್ಯಾಚ್‌ನ ಭಾರತೀಯ ಅರಣ್ಯ ಸೇವೆ ಕೇಡರ್‌ಗೆ ಸೇರಿದ ಅಧಿಕಾರಿ ಅನೇಕ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಕರ್ನಾಟಕದಲ್ಲಿ ಸೇವೆ ಆರಂಭಿಸಿದ್ದರು, 1993 ರಿಂದ 2007 ರವರೆಗೆ ವನ್ಯಜೀವಿ, ಸಾಮಾಜಿಕ ಅರಣ್ಯ, ಪ್ರಾದೇಶಿಕ ಮತ್ತು ಕಾರ್ಯ ಯೋಜನೆ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದರು, ನಂತರ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಸೇವೆಗೆ ನಿಯೋಜನೆಗೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!