ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ತನುಶ್ರೀ ದತ್ತಾ ತನ್ನದೇ ಶೈಲಿಯಲ್ಲಿ ಎಲ್ಲರ ಮನಸ್ಸಿಗೆ ಹತ್ತಿರವಾದವರು. ಕೇವಲ ನಟನೆ ಅಲ್ಲದೆ ಸಿನಿಮಾ ರಂಗದಲ್ಲಿ ಹೆಣ್ಣುಮಕ್ಕಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ಧ್ವನಿ ಎತ್ತಿದವರು.
2018ರಲ್ಲಿ ಚಿತ್ರರಂಗದಲ್ಲಿ ಮೀ ಟೂ ಚಳವಳಿ ಜೋರಾಗಿ ಸದ್ದು ಮಾಡಿದ ಸಂದರ್ಭ ಹಲವು ಕ್ಷೇತ್ರಗಳ ಹೆಣ್ಣುಮಕ್ಕಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಲು ಮುಂದೆ ಬಂದಾಗ ನಟಿ ತನುಶ್ರೀ ದತ್ತಾ (Tanushree Dutta) ಈ ವೇಳೆ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ದನಿ ಎತ್ತಿದ್ದರು.
2008ರಲ್ಲಿ ‘ಹಾರ್ನ್ ಓಕೆ ಪ್ಲೀಸ್’ ಸಿನಿಮಾದ ಚಿತ್ರೀಕರಣದ ಸೆಟ್ನಲ್ಲಿ ನಾನಾ ಪಾಟೇಕರ್ (Nana Patekar) ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದರು ಎಂದು ತನುಶ್ರೀ ಆರೋಪಿಸಿದ್ದರು.
ಬಳಿಕ ಮೀ ಟೂ MeeToo ಚಳವಳಿಯ ನಾಯಕಿಯೂ ಆಗಿದ್ದ ತನುಶ್ರೀ ಅದಾಗಲೇ ಚಿತ್ರರಂಗದಿಂದ ಕಣ್ಮರೆಯಾದರು.
ಆಕೆ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು. ಉಜ್ಜಯಿನಿಯಲ್ಲಿದ್ದಾಗ ತಮ್ಮ ಕಾರಿನ ಬ್ರೇಕ್‌ಗಳನ್ನು ಹಲವು ಬಾರಿ ಟ್ಯಾಂಪರ್ ಮಾಡಲಾಗಿತ್ತು. ಇದರಿಂದ ಅನೇಕ ಅಪಘಾತಗಳನ್ನು ಎದುರಿಸಿರುವುದಾಗಿ ಹೇಳಿದ್ದರು. ಈ ಅಪಘಾತದಲ್ಲಿ ಸಾಕಷ್ಟು ರಕ್ತ ಸೋರಿದ್ದರಿಂದ ಇದರಿಂದ ಗುಣಮುಖರಾಗಲು ಬಹಳಷ್ಟು ಸಮಯ ಹಿಡಿದಿತ್ತು. ಇದಾದ ಮೇಲೆ ಚಿತ್ರರಂಗದಿಂದ ಇವರು ಮರೆಯಾಗುತ್ತಲೇ ಸಾಗಿದರು.
ಆದ್ರೆ ಇದೀಗ ಮತ್ತೆ ತನುಶ್ರೀ ದತ್ತಾ ಮುನ್ನೆಲೆಗೆ ಬಂದಿದ್ದಾರೆ. ಅದೇನೆಂದರೆ ಬಾಲಿವುಡ್ನ (Bollywood) ಬಗ್ಗೆ ತನುಶ್ರೀ ಭಯಾನಕ ಭವಿಷ್ಯ ನುಡಿದಿದ್ದಾರೆ. ಕಳೆದ ನವೆಂಬರ್ ತಿಂಗಳಿನಲ್ಲಿ ಈಕೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದ ಪೋಸ್ಟ್ ಇದೀಗ ವೈರಲ್ ಆಗಿದೆ.
ಮುಂದಿನ ವರ್ಷದ ವೇಳೆಗೆ ಅನೇಕ ಬಾಲಿವುಡ್ ನಟರು ಮತ್ತು ಚಲನಚಿತ್ರ ನಿರ್ಮಾಪಕರು ದಿವಾಳಿಯಾಗುತ್ತಾರೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ತನುಶ್ರೀ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನಟಿ ‘ 2022ರ ಡಿಸೆಂಬರ್ 31 ರ ವೇಳೆಗೆ ಫೈನಾನ್ಷಿಯರ್‌ಗಳು ಬಾಲಿವುಡ್ ಚಲನಚಿತ್ರಗಳು ಮತ್ತು ಯೋಜನೆಗಳಿಗೆ ಹಣ ನೀಡುವುದನ್ನು ನಿಲ್ಲಿಸುತ್ತಾರೆ ಎಂದು ಹೇಳಿದ್ದರು. ಈ ಭವಿಷ್ಯ ಸಾಕಷ್ಟು ಸರಿಯಾಗಿದೆ.
ಇದೀಗ 2023ರ ಬಾಲಿವುಡ್ ಭವಿಷ್ಯವನ್ನೂ ನುಡಿದಿದ್ದಾರೆ. ಅದರಲ್ಲಿ ಅವರು, ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ಕಲಾವಿದರು ಏಪ್ರಿಲ್ 2023 ರ ವೇಳೆಗೆ ದಿವಾಳಿ(bankruptcy)ಯಾಗುತ್ತಾರೆ. ಒಟಿಟಿಯಲ್ಲಿ ಬರುವ ಚಿತ್ರಗಳು ಕಡಿಮೆ ಪ್ರೇಕ್ಷಕರನ್ನು ಪಡೆಯುತ್ತವೆ. ಜನರು ಈಗ ಪ್ರಪಂಚದಾದ್ಯಂತದ ಹೆಚ್ಚಿನ ವಿಷಯವನ್ನು ಹಿಂದಿ ಅಥವಾ ಇನ್ನೊಂದು ಪ್ರಾದೇಶಿಕ ಭಾಷೆಗೆ ಡಬ್ (Dubbing) ಮಾಡುತ್ತಾರೆ ಎಂದು ಹೇಳಿದ್ದಾರೆ.
ಇದೀಗ ಇವರು ಈ ರೀತಿ ಭವಿಷ್ಯ ನುಡಿಯುತ್ತಿದ್ದನು ನೋಡಿದರೆ ನೂರಾರು ವರ್ಷಗಳ ಮುಂಚೆಯೇ ತಿಳಿಸಿ ಹೋಗಿದ್ದ ಅಂಧ ಮಹಿಳೆ ಬಾಬಾ ವಾಂಗಾ (Baba Wanga) ಅವರಿಗೆ ಹೋಲಿಸಲಾಗುತ್ತಿದೆ. ಇದೀಗ ಇವರ ಭವಿಷ್ಯ ಎಷ್ಟು ನಿಜವಾಗುತ್ತದೆ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.