ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿರಂಜೀವಿ ಅಭಿನಯದ `ಭೋಲಾ ಶಂಕರ್’ ಸಿನಿಮಾ ಫ್ಲಾಪ್ ಆದ ನಂತರ ಮುಂದಿನ ಸಿನಿಮಾ ಯಾವುದು ಎಂದು ಎಲ್ಲರೂ ಕಾಯುತ್ತಿದ್ದಾರೆ. ಚಿರಂಜೀವಿ ರಿಮೇಕ್‌ಗಳನ್ನು ನಿಲ್ಲಿಸಿ ಮೂಲ ಕಥೆಗಳೊಂದಿಗೆ ಬರಬೇಕೆಂದು ಅಭಿಮಾನಿಗಳು ಮತ್ತು ಪ್ರೇಕ್ಷಕರು ಒತ್ತಾಯಿಸಿದ್ದಾರೆ. ಸದ್ಯ ಚಿರಂಜೀವಿ ಕೈಯಲ್ಲಿ ಮೂರು ಪ್ರಾಜೆಕ್ಟ್‌ಗಳಿವೆ. ಇಂದು ಚಿರಂಜೀವಿ ಅವರ ಜನ್ಮದಿನವಾದ್ದರಿಂದ, ಮೆಗಾ 156, ಮೆಗಾ157 ಸಿನಿಮಾಗಳನ್ನು ಘೋಷಿಸಿದ್ದಾರೆ.
ಮೆಗಾ 156, ಸಿನಿಮಾಗೆ ನಿರ್ದೇಶಕರು ಯಾರೆಂದು ಇನ್ನೂ ಖಚಿತವಾಗಿಲ್ಲ. ಮೆಗಾ 157 ಚಿತ್ರವನ್ನು ಯುವಿ ಕ್ರಿಯೇಷನ್ಸ್ ನಿರ್ಮಿಸಲಿದು, ಈ ಚಿತ್ರವನ್ನು ವಸಿಷ್ಠ ನಿರ್ದೇಶಿಸಲಿದ್ದಾರೆ. ಕಲ್ಯಾಣ್ ರಾಮ್ ಅವರ ಬಿಂಬಿಸಾರ ಚಿತ್ರದ ಮೂಲಕ ತಮ್ಮ ಮೊದಲ ದೊಡ್ಡ ಹಿಟ್ ಪಡೆದ ವಸಿಷ್ಟ ಅವರು ತಮ್ಮ ಎರಡನೇ ಚಿತ್ರದಲ್ಲಿ ಚಿರಂಜೀವಿಯನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರವು ಸೋಷಿಯೋ ಫ್ಯಾಂಟಸಿ ಕಥೆಯಾಗಿರಲಿದೆ ಎಂಬ ಸುದ್ದಿ ಇದೆ.
ಯುವಿ ಕಂಪನಿ ಮೆಗಾ 157 ಸಿನಿಮಾವನ್ನು ಘೋಷಿಸುವ ಸಂದರ್ಭದಲ್ಲಿ ಸೋಶಿಯೋ ಫ್ಯಾಂಟಸಿಯಂತೆ ಕಾಣುವ ಕುತೂಹಲಕಾರಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಈ ಸಿನಿಮಾದ ಘೋಷಣೆಯೊಂದಿಗೆ ಚಿರಂಜೀವಿಯನ್ನು ಹೊಸ ರೀತಿಯಲ್ಲಿ ತೋರಿಸಲಿದ್ದಾರಂತೆ.