ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಪ್ರಥಮ ಸ್ಥಾನಿಕ ನಿಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಪ್ರಥಮ ಸ್ಥಾನಿಕರಾಗಿದ್ದ ಕರಗಂ ನಾರಾಯಣ ಅಯ್ಯಂಗಾರ್ ಅವರು (82) ವಿಧಿವಶರಾಗಿದ್ದಾರೆ. ಈ ಕಾರಣಕ್ಕಾಗಿ ಭಕ್ತರಿಗೆ ಇಂದು ಮಧ್ಯಾಹ್ನದವರೆಗೆ ದೇವರ ದರುಶನಕ್ಕೆ ನಿರ್ಬಂಧ ಹೇರಲಾಗಿದೆ.

ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ನಂತರವೂ ದೇವಸ್ಥಾನದಲ್ಲಿಯೇ ಉಳಿದುಕೊಂಡಿದ್ದ ಕರಗಂ ನಾರಾಯಣ ಅಯ್ಯಂಗಾರ್ ಅವರಿಗೆ ರಾಜ್ಯ ಪ್ರಶಸ್ತಿಯೂ ಲಭಿಸಿದೆ. ನಿವೃತ್ತಿಯ ನಂತರ ಚೆಲುವನಾರಾಯಣಸ್ವಾಮಿ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕಾಲ ದುಡಿದರು. ವಯೋಸಹಜ ಅಸೌಖ್ಯದಿಂದ ಇಂದು ಮೇಲುಕೋಟೆಯ ಸ್ವಗೃಹದಲ್ಲಿ ನಿಧನರಾದರು.

ಕರಗಂ ನಾರಾಯಣ ಅಯ್ಯಂಗಾರ್ ಅವರ ಅಂತ್ಯಕ್ರಿಯೆಯನ್ನು ಇಂದು ಬೆಳಿಗ್ಗೆ 11:30 ಕ್ಕೆ ಮೇಲುಕೋಟೆಯ ಸಾಂಪ್ರದಾಯಿಕ ದೇವಾಲಯದ ವಿಧಿ ವಿಧಾನಗಳ ಅಂಗವಾಗಿ ನೆರವೇರಿಸಲಾಗುವುದು. ಹೀಗಾಗಿ ಇಂದು ಮಧ್ಯಾಹ್ನದವರೆಗೂ ದೇವಸ್ಥಾನದ ಬಾಗಿಲು ಮುಚ್ಚಿದ್ದು, ಬಳಿಕ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!