ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಫ್ರಾನ್ಸ್ ಪ್ರವಾಸ ಮುಗಿಸಿ ಯುಎಇ ಯಲ್ಲಿದ್ದಾರೆ.
ಈ ಕ್ಷಣ ಫ್ರಾನ್ಸ್ ಪ್ರವಾಸವನ್ನು ನೆನಪಿಸಿಕೊಂಡ ಅವರು, ಈ ಭೇಟಿ ನೆನಪಿನಲ್ಲಿ ಉಳಿಯುವಂತದ್ದು , ಬಾಸ್ಟಿಲ್ ಡೇ ಪರೇಡ್‌ನಲ್ಲಿ (Bastille Day parade) ಭಾರತೀಯ ತುಕಡಿಗೆ ಸ್ಥಾನ ಸಿಕ್ಕಿರುವುದು ಪ್ರಶಸಂನೀಯ ಎಂದು ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron )ಅವರ ಆಹ್ವಾನದ ಮೇರೆಗೆ ಮೋದಿ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಫ್ರಾನ್ಸ್‌ಗೆ ತೆರಳಿದ್ದರು. ಈ ಫ್ರಾನ್ಸ್ ಭೇಟಿ ಸ್ಮರಣೀಯವಾಗಿದೆ. ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದರಿಂದ ಅದು ಮತ್ತಷ್ಟು ವಿಶೇಷವಾಗಿದೆ. ಪರೇಡ್‌ನಲ್ಲಿ ಭಾರತೀಯ ತುಕಡಿ ನೋಡಿ ಹೆಮ್ಮೆಯೆನಿಸಿತು. ಆತ್ಮೀಯ ಆತಿಥ್ಯಕ್ಕಾಗಿ ನಾನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಫ್ರೆಂಚ್ ಜನರಿಗೆ ಕೃತಜ್ಞನಾಗಿದ್ದೇನೆ. ಭಾರತ-ಫ್ರಾನ್ಸ್ ಸ್ನೇಹ ಮತ್ತಷ್ಟು ಗಾಢವಾಗಿದೆ ಎಂದು ಮೆರವಣಿಗೆಯ ಫೋಟೊಗಳನ್ನು ಮೋದಿ ಟ್ವೀಟ್ ಮಾಡಿದ್ದಾರೆ.
Here are highlights from yesterday’s programmes in Paris, which include the iconic Bastille Day parade. pic.twitter.com/HmDcRSdjs1
— Narendra Modi (@narendramodi) July 15, 2023
ಬಾಸ್ಟಿಲ್ ಡೇ ಪರೇಡ್‌ನ ವಿಡಿಯೊವನ್ನೂ ಅವರು ಟ್ವಿಟರ್ ನಲ್ಲಿ ಹಂಚಿಕೊಂಡ ಮೋದಿ, ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಮೋದಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಈ ಪರೇಡ್ ನಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ರಫೇಲ್ ಫೈಟರ್ ಜೆಟ್‌ಗಳು ಸಹ ಫ್ರೆಂಚ್ ಜೆಟ್‌ಗಳೊಂದಿಗೆ ಫ್ಲೈಪಾಸ್ಟ್‌ಗೆ ಮಾಡಿತ್ತು.