ಇತ್ತೀಚಿನ ವರ್ಷಗಳಲ್ಲಿ ಗಡ್ಡ ಇಟ್ಕೋಳೋದು ಒಂದು ಫ್ಯಾಷನ್. ಆದರೆ ಅನೇಕ ಯುವಕರಿಗೆ ಗಡ್ಡದ ಕೂದಲು ಸರಿಯಾಗಿ ಬೆಳೆಯಲ್ಲ ಅಥವಾ ನಾನಾ ಕಡೆ ಕಡಿಮೆಯಾಗಿರುತ್ತದೆ. ಇದರಿಂದ ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತೆ. ಹಾಗಾಗಿ, ಗಡ್ಡ ಚೆನ್ನಾಗಿ ಬೆಳೆಯದಿದ್ದರೆ ಅದರ ಹಿಂದೆ ಇರುವ ಕಾರಣಗಳನ್ನೂ ಅರಿತು, ಅದರ ಪರಿಹಾರಕ್ಕೆ ಸರಿಯಾದ ಮನೆಮದ್ದುಗಳನ್ನೂ ಬಳಸುವುದು ಉತ್ತಮ. ಜೊತೆಗೆ ನಿಮ್ಮ ಆಹಾರಕ್ರಮವನ್ನು ಸುಧಾರಿಸುವ ಮೂಲಕ, ಒತ್ತಡ ಮುಕ್ತವಾಗಿ ಉಳಿಯುವ ಮೂಲಕ, ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಮತ್ತು ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ನೀವು ಇದನ್ನು ಸರಿಪಡಿಸಬಹುದು.
ಗಡ್ಡ ಸರಿಯಾಗಿ ಬರೋದಿಲ್ಲ ಯಾಕೆ?
ಪೋಷಕಾಂಶಗಳ ಕೊರತೆ, ಹಾರ್ಮೋನಲ್ ಅಸಮತೋಲನ, ಕುಟುಂಬಪರಂಪರೆ, ಒತ್ತಡ ಅಥವಾ ನಿದ್ರೆಯ ಕೊರತೆ, ಮತ್ತು testosterone ಪ್ರಮಾಣ ಕಡಿಮೆಯಾಗಿರುವುದು ಗಡ್ಡದ ಬೆಳವಣಿಗೆಗೆ ಪರಿಣಾಮ ಬೀರುತ್ತದೆ.
ಇಲ್ಲಿವೆ ಗಡ್ಡ ಬೆಳವಣಿಗೆಗೆ ಸಹಾಯಕವಾಗುವ ಮನೆಮದ್ದುಗಳು:
ಈರುಳ್ಳಿ ರಸ + ತೆಂಗಿನ ಎಣ್ಣೆ: ಈ ಎರಡು ಅಂಶಗಳು ಕೂದಲು ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಈರುಳ್ಳಿ ರಸವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತೆಂಗಿನ ಎಣ್ಣೆಯು ಪೋಷಕಾಂಶ ನೀಡುತ್ತದೆ. ಎರಡನ್ನು ಮಿಶ್ರಣ ಮಾಡಿ ದಿನವೊಂದಿಗೊಮ್ಮೆ ಗಡ್ಡದ ಭಾಗದಲ್ಲಿ ಹಚ್ಚಿ.
ಪುದೀನಾ ಎಣ್ಣೆ + ಕ್ಯಾಸ್ಟರ್ ಆಯಿಲ್: ಪುದೀನಾ ಎಣ್ಣೆ ತ್ವಚೆಗೆ ತಂಪು ನೀಡುತ್ತದೆ ಮತ್ತು ರಕ್ತ ಸಂಚಲನ ಹೆಚ್ಚಿಸುತ್ತದೆ. ಕ್ಯಾಸ್ಟರ್ ಆಯಿಲ್ ದೃಢ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮಿಶ್ರಣ ದಿನನಿತ್ಯ ರಾತ್ರಿ ಹಚ್ಚಿ ಮಸಾಜ್ ಮಾಡಿ.
ಅಲೋವೆರಾ + ದಾಲ್ಚಿನ್ನಿ ಪೇಸ್ಟ್: 1 ಚಮಚ ದಾಲ್ಚಿನ್ನಿ ಪುಡಿಗೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಗಡ್ಡದ ಭಾಗದಲ್ಲಿ 20 ನಿಮಿಷ ಹಚ್ಚಿ ನಂತರ ತೊಳೆಯಿರಿ. ಇದು ತ್ವಚೆಯ ಆರೋಗ್ಯವನ್ನೂ ಹೆಚ್ಚಿಸುತ್ತದೆ.
ಈ ಮನೆಮದ್ದುಗಳು ನಿರಂತರವಾಗಿ ಬಳಸಿದರೆ, ನೈಸರ್ಗಿಕವಾಗಿ ಗಡ್ಡದ ಬೆಳವಣಿಗೆ ಸುಧಾರಣೆಯಾಗುತ್ತದೆ. ಜೊತೆಗೆ ಉತ್ತಮ ನಿದ್ರೆ, ಸಮತೋಲನ ಆಹಾರ ಮತ್ತು ದಿನಚರೆಯ ನಿಯಂತ್ರಣವೂ ಅಗತ್ಯ. (ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)