ಸಾವಿರಾರು ವರ್ಷಗಳಿಂದ ತ್ವಚೆಯ ಆರೈಕೆ ಮಹಿಳೆಯರ ವಿಷಯ ಎಂದು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ ಸೌಂದರ್ಯ ಮತ್ತು ಆರೋಗ್ಯ ಎಂಬುದು ಲಿಂಗವನ್ನು ತಾರತಮ್ಯ ಮಾಡದು. ಇಂದಿನ ಕಾಲದಲ್ಲಿ ಪುರುಷರು ಸಹ ತಮ್ಮ ತ್ವಚೆಯ ಆರೈಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಪರಿಸರ ಮಾಲಿನ್ಯ, ಅಸಮರ್ಪಕ ಜೀವನಶೈಲಿ, ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಗಳ ಪರಿಣಾಮದಿಂದಾಗಿ ಚರ್ಮದ ಮೇಲೆ ಹಾನಿಕಾರಕ ಪರಿಣಾಮಗಳು ಬೀರುತ್ತಿವೆ. ಇದರಿಂದಾಗಿ ಮಹಿಳೆಯರಂತೆ ಪುರುಷರು ಸಹ ತಮಗೆ ತಕ್ಕ ತ್ವಚಾ ಉತ್ಪನ್ನಗಳನ್ನು ಆಯ್ಕೆಮಾಡಿ ದಿನನಿತ್ಯದ ಆರೈಕೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಪುರುಷರ ಚರ್ಮದ ಆರೈಕೆಗೆ ಅನುಸರಿಸಬೇಕಾದ ಕ್ರಮಗಳು
ದಿನನಿತ್ಯ ಕ್ಲೆನ್ಸಿಂಗ್
ಪುರುಷರು ದಿನಕ್ಕೆ ಕನಿಷ್ಠ ಎರಡು ಬಾರಿ ಮುಖ ತೊಳೆಯುವುದು ಬಹಳ ಮುಖ್ಯ. ಇದರಿಂದ ಧೂಳು, ಬೆವರು ಮತ್ತು ತೈಲವು ಚರ್ಮದಿಂದ ಹೊರಹೋಗಿ ತಾಜಾತನವನ್ನು ಕಾಪಾಡುತ್ತದೆ.
ಫೇಸ್ ವಾಶ್ ಮತ್ತು ಸ್ಕ್ರಬ್ ಬಳಕೆ
ಸಾಮಾನ್ಯ ಸಾಬೂನು ಬದಲು ಚರ್ಮಕ್ಕೆ ಸೂಕ್ತವಾದ ಫೇಸ್ ವಾಶ್ ಬಳಸಬೇಕು. ವಾರಕ್ಕೆ 2-3 ಬಾರಿ ಫೇಶಿಯಲ್ ಸ್ಕ್ರಬ್ ಬಳಸುವುದರಿಂದ ಸತ್ತ ಕೋಶಗಳು ತೆಗೆದುಹಾಕಿ ಚರ್ಮವನ್ನು ನಯಗೊಳಿಸುತ್ತದೆ.
ಮಾಯಿಶ್ಚರೈಸರ್ ಬಳಕೆ
ಚರ್ಮ ಒಣಗದಂತೆ ತಡೆಯಲು ಪ್ರತಿದಿನ ಮಾಯಿಶ್ಚರೈಸರ್ ಬಳಕೆ ಬಹಳ ಅಗತ್ಯ. ಇದರಿಂದ ಚರ್ಮ ಮೃದುವಾಗಿ, ತಾಜಾ ಆಗಿರುತ್ತದೆ.
ಸನ್ಸ್ಕ್ರೀನ್ ಪ್ರಾಮುಖ್ಯತೆ
ಬಿಸಿಲಿನಿಂದ ರಕ್ಷಣೆ ಪಡೆಯಲು ಪುರುಷರೂ ಸನ್ಸ್ಕ್ರೀನ್ ಬಳಸಬೇಕು. ಇದರಿಂದ ಚರ್ಮದ ಹಾನಿ ಕಡಿಮೆ ಆಗಿ, ಅಕಾಲಿಕ ವಯಸ್ಸು ತಡೆಯಬಹುದು.
ಶೇವಿಂಗ್ ನಂತರದ ಆರೈಕೆ
ಶೇವಿಂಗ್ ಮಾಡಿದ ಬಳಿಕ ಆಫ್ಟರ್ಶೇವ್ ಅಥವಾ ಸೂಕ್ತವಾದ ಸ್ಕಿನ್ ಲೋಷನ್ ಬಳಸುವುದು ಮುಖ್ಯ. ಇದರಿಂದ ಚರ್ಮದಲ್ಲಿ ಉಂಟಾಗುವ ಉರಿಯೂತ ಮತ್ತು ಒಣಗುವಿಕೆ ಕಡಿಮೆಯಾಗುತ್ತದೆ.