Mental Health | ನಿಮಗೂ ಪದೇ ಪದೇ ಪ್ಯಾನಿಕ್ ಅಟ್ಯಾಕ್ ಆಗ್ತಿದ್ಯಾ? ಅದ್ರಿಂದ ಹೊರಬರೋಕೆ ಇಲ್ಲಿದೆ ಸುಲಭ ಉಪಾಯ

ಪ್ಯಾನಿಕ್ ಅಟ್ಯಾಕ್ ಅಂದರೆ ತೀವ್ರವಾದ ಭಯ ಅಥವಾ ಆತಂಕದ ಮನಸ್ಥಿತಿ, ಇದು ಹಠಾತ್ ಆಗಿ ಉಂಟಾಗುತ್ತದೆ. ಇದರಲ್ಲಿ ಹೃದಯ ಬಡಿತ ಹೆಚ್ಚಾಗುವುದು, ಉಸಿರಾಟ ತೊಂದರೆ, ಹೆದರಿಕೆಯ ಭಾವನೆ, ಅಸಹಜವಾದ ಭಾವನೆಗಳು ಕಂಡುಬರುತ್ತವೆ. ಈ ಪ್ಯಾನಿಕ್ ಅಟ್ಯಾಕ್ ಕಂಟ್ರೋಲ್ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.

ಆಳವಾದ ಉಸಿರಾಟ (Deep Breathing):
ನಿಧಾನವಾಗಿ ಮತ್ತು ಆಳವಾಗಿ ಉಸಿರಾಟ ಮಾಡುವುದು ದೇಹವನ್ನು ಶಾಂತಗೊಳಿಸುತ್ತದೆ. 4 ಸೆಕೆಂಡು ಉಸಿರೆಳೆದು, 4 ಸೆಕೆಂಡು ಹಿಡಿದು, 6 ಸೆಕೆಂಡು ಬಿಡುವುದು ಉತ್ತಮ ವಿಧಾನ.

ಗ್ರೌಂಡಿಂಗ್ ತಂತ್ರ (Grounding Technique):
ನಿಮ್ಮ ಸುತ್ತಲಿನ ವಾತಾವರಣವನ್ನು ಗಮನಿಸಿ: 5 ವಸ್ತುಗಳನ್ನು ನೋಡಿ, 4 ಅನ್ನು ಸ್ಪರ್ಶಿಸಿ, 3 ಶಬ್ದ ಕೇಳಿ, 2 ವಾಸನೆ ಗುರುತಿಸಿ, 1 ರುಚಿ ಅನುಭವಿಸಿ. ಇದು ನಿಮ್ಮ ಗಮನವನ್ನು ಪ್ರಸ್ತುತ ಕ್ಷಣದಲ್ಲಿ ಹಿಡಿತಕ್ಕೆ ತರಲು ಸಹಾಯಕವಾಗುತ್ತದೆ.

ನಿಮಗೆ ನೀವೇ ಸಮಾಧಾನ ಮಾಡಿಕೊಳ್ಳಿ:(Positive Affirmation):
ನಿಮ್ಮ ಮನಸ್ಸಿಗೆ ನಿಮಗೆ ಭಯವಾಗಿರುವುದು ತಾತ್ಕಾಲಿಕ ಎಂದು ಹೇಳಿಕೊಳ್ಳಿ. “ಈ ಸಮಯ ಕಳೆದು ಹೋಗುತ್ತದೆ” ಎಂಬ ಧನಾತ್ಮಕ ಮಾತುಗಳು ಶಾಂತಿಯುತ ಭಾವನೆ ನೀಡುತ್ತವೆ.

ದೈಹಿಕ ಚಟುವಟಿಕೆ (Physical Activity):
ಸ್ವಲ್ಪ ನಡೆಯುವುದು, ಹಾಡು ಕೇಳುವುದು ಇಂತಹ ಚಟುವಟಿಕೆಗಳು ದೇಹದಲ್ಲಿ ಉಂಟಾಗುವ ಅಡ್ರಿನಾಲಿನ್ ಹಾರ್ಮೋನ್ ಅನ್ನು ಕಡಿಮೆ ಮಾಡುತ್ತದೆ.

ಮನೆಯವರಿಂದ ಸಹಾಯ ಕೇಳಿ (Seek Support):
ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಮಾತನಾಡುವುದು ಅಥವಾ ತಜ್ಞರ ಸಹಾಯವನ್ನು ಪಡೆಯುವುದು ತುಂಬಾ ಉಪಯುಕ್ತ.

ಪ್ಯಾನಿಕ್ ಅಟ್ಯಾಕ್‍‌ಗಳು ಭಯಾನಕವಾಗಿರಬಹುದು, ಆದರೆ ಸಮರ್ಥವಾಗಿ ನಿಭಾಯಿಸಬಹುದಾಗಿದೆ. ಸರಿಯಾದ ತಂತ್ರಗಳನ್ನು ಅಭ್ಯಾಸ ಮಾಡಿದರೆ, ಆತಂಕವನ್ನು ನಿಯಂತ್ರಿಸಲು ಸಾಧ್ಯವಿದೆ. ಅಗತ್ಯವಿದ್ದರೆ ನಿರ್ದಿಷ್ಟ ಚಿಕಿತ್ಸೆ ಅಥವಾ ತಜ್ಞರ ಸಲಹೆ ಪಡೆಯುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!