Mental Health | ಒಬ್ರೇ ಇದ್ದಾಗ ಬೋರಾಗುತ್ತಿದೆ ಎಂದು ಕೊರಗಬೇಡಿ: ಈ ಟಿಪ್ಸ್ ಫಾಲೋ ಮಾಡಿದ್ರೆ ಒಂಟಿತನದಲ್ಲೂ ಖುಷಿಯಾಗಿರಬಹುದು

ಜೀವನದಲ್ಲಿ ಬಹುತೆಕ ಜನರು ಒಬ್ಬರೇ ಇರಬೇಕಾದ ಸಂದರ್ಭಗಳನ್ನು ಎದುರಿಸುತ್ತಾರೆ. ಕೆಲವರಿಗೆ ಅದು ಒತ್ತಡದ ಅನುಭವವಾಗಬಹುದು, ಆದರೆ ಸತ್ಯ ಏನೆಂದರೆ – ಒಬ್ಬರೇ ಇದ್ದಾಗಲೂ ಸುಖಿಯಾಗಿರಲು ಸಾಧ್ಯ. ಅದೆಲ್ಲವೂ ನಮ್ಮ ದೃಷ್ಟಿಕೋನ ಮತ್ತು ಬದುಕನ್ನು ನೋಡುವ ವಿಧಾನದ ಮೇಲೆ ಅವಲಂಬಿತವಾಗಿದೆ.

ಮಾನಸಿಕ ತಜ್ಞರ ಪ್ರಕಾರ ಒಂಟಿತನಕ್ಕೂ ಏಕಾಂತಕ್ಕೂ ವ್ಯತ್ಯಾಸವಿದೆ. ಆರೋಗ್ಯಕ್ಕೆ ಕೆಲವು ಬಾರಿ ಏಕಾಂತವೂ ಬೇಕಾಗುತ್ತದೆ. ಏಕಾಂತದಲ್ಲಿಯೇ ಮನಸ್ಸು ಪ್ರಶ್ನೆಗಳನ್ನು ಹಾಕಿಕೊಳ್ಳಲು, ಉತ್ತರ ಕಂಡುಕೊಳ್ಳಲು ಕಲಿಯುತ್ತದೆ. ಕೆಲವೊಮ್ಮೆ ಒಂಟಿತನವೂ ಕಾಡಬಹುದು. ಆದರೆ ಒಂಟಿತನವನ್ನು ಏಕಾಂತದತ್ತ ತಿರುಗಿಸಬೇಕು ಅಷ್ಟೇ.

ನಿಮ್ಮನ್ನು ಸ್ವೀಕರಿಸಿ ಮತ್ತು ಪ್ರೀತಿಸಿ
ಒಬ್ಬರೇ ಇದ್ದಾಗ, ನಿಮ್ಮ ವೈಯಕ್ತಿಕತೆಯನ್ನು ಅರಿತುಕೊಳ್ಳಲು ಇದು ಉತ್ತಮ ಸಮಯ. ನಿಮ್ಮ ಶಕ್ತಿಗಳು ಮತ್ತು ದೌರ್ಬಲ್ಯಗಳನ್ನು ಒಪ್ಪಿಕೊಂಡು, ನಿಮ್ಮನ್ನು ನೀವು ಪ್ರೀತಿಸುವುದು ಜೀವನದಲ್ಲಿ ಶಾಂತಿ ತರುವ ಮೊದಲನೆಯ ಹೆಜ್ಜೆಯಾಗಿದೆ.

ಹವ್ಯಾಸಗಳನ್ನು ಬೆಳೆಸಿಕೊಳ್ಳಿ
ಒಬ್ಬರೇ ಇದ್ದಾಗ ನೀವು ಹವ್ಯಾಸಗಳತ್ತ ಗಮನ ಹರಿಸಬಹುದು – ಓದು, ಬರೆವುದೇ ಆಗಿರಲಿ ಅಥವಾ ಚಿತ್ರಕಲೆ, ಸಂಗೀತ, ಗಾರ್ಡನಿಂಗ್ ಇವುಗಳು ನಿಮ್ಮ ಮನಸ್ಸನ್ನು ಬ್ಯುಸಿಯಾಗಿ ಇಡುತ್ತವೆ ಮತ್ತು ಆಂತರಿಕ ಸಂತೋಷವನ್ನು ತರುತ್ತವೆ.

ಧ್ಯಾನ ಮತ್ತು ಯೋಗ ಅಭ್ಯಾಸ ಮಾಡಿ
ಧ್ಯಾನ ಮತ್ತು ಯೋಗದಿಂದ ಮಾನಸಿಕ ಶಾಂತಿ ಹಾಗೂ ಸ್ಥಿತಪ್ರಜ್ಞತೆ ದೊರಕುತ್ತದೆ. ಇವುಗಳು ಒಬ್ಬರೇ ಇದ್ದಾಗ ಉಂಟಾಗುವ ಖಿನ್ನತೆಗೆ ಪರಿಹಾರವಾಗುತ್ತವೆ.

ನಿತ್ಯ ಧನ್ಯತೆಯ ಅಭ್ಯಾಸ
ಪ್ರತಿದಿನವೂ ನೀವು ಕೃತಜ್ಞತೆ ಹೊಂದಿರುವ 3 ಸಂಗತಿಗಳನ್ನು ಬರೆಯಿರಿ. ಇದು ನಿಮ್ಮ ದೃಷ್ಟಿಕೋನವನ್ನು ನಕಾರಾತ್ಮಕದಿಂದ ಧನಾತ್ಮಕವಾಗಿಸಲು ಸಹಾಯ ಮಾಡುತ್ತದೆ.

ನಿಸರ್ಗದ ಜೊತೆ ಕಾಲ ಕಳೆಯಿರಿ
ನಿಸರ್ಗದಲ್ಲಿ ನಡೆಯುವುದು, ಉದ್ಯಾನವನದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಮನಸ್ಸಿಗೆ ಆಹ್ಲಾದಕರವಾಗಿರುತ್ತದೆ. ನಿಸರ್ಗದ ಸೌಂದರ್ಯ ನಿಮ್ಮ ಅಂತರಾಳದ ಶೂನ್ಯತೆಯನ್ನು ತುಂಬಬಲ್ಲದು.

ಒಬ್ಬರೇ ಇರುವುದು ಶಾಪವಲ್ಲ, ಅದು ವರದಾನವಾಗಬಹುದು. ಅದು ನಿಮ್ಮೊಳಗಿನ ಶಕ್ತಿ, ಶಾಂತಿ ಮತ್ತು ಖುಷಿಯನ್ನು ಕಂಡುಕೊಳ್ಳುವ ಅವಕಾಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!