Forest Bathing, ಅಥವಾ ಜಪಾನಿನಲ್ಲಿ ಹೇಳುವಂತೆ Shinrin-Yoku, ಎಂದರೆ ಕಾಡಿನಲ್ಲಿ ನಡುಹಸಿರಿನ ಮಧ್ಯೆ ಸಮಯ ಕಳೆಯುವುದು. ಇದು ಶಬ್ದರಹಿತ, ಶಾಂತ ಮತ್ತು ನೈಸರ್ಗಿಕ ಪರಿಸರದಲ್ಲಿ ದೇಹ-ಮನಸ್ಸಿಗೆ ವಿಶ್ರಾಂತಿ ನೀಡುವ ಪದ್ಧತಿಯಾಗಿದ್ದು, ಜಪಾನ್‌ನಲ್ಲಿ 1980ರ ದಶಕದಲ್ಲಿ ಜನಪ್ರಿಯವಾಯಿತು. ಇದನ್ನು ಯಾವುದೇ ರೀತಿಯ ವ್ಯಾಯಾಮ, ಹೈಕಿಂಗ್ ಅಥವಾ ಧ್ಯಾನ ಎಂಬ ನೋಟದಿಂದ ನೋಡುವುದಿಲ್ಲ — ಇದು ಕೇವಲ ನಡುಕಾಡಿನಲ್ಲಿ ತಮ್ಮನ್ನು ತಾವು ಪ್ರಕೃತಿಗೆ ಒಪ್ಪಿಸುವ ಪ್ರಕ್ರಿಯೆ.
ಈ ವಿಧಾನದಲ್ಲಿ ವ್ಯಕ್ತಿಯು ಕಾಡಿನಲ್ಲಿ ನಡೆಯುತ್ತಾನೆ, ತಂಪಾದ ಗಾಳಿಯ ಉಸಿರಾಟ, ಹಕ್ಕಿಗಳ ಧ್ವನಿ, ಎಲೆಗಳ ಚಲನೆ, ನೆಲದ ಮಣ್ಣಿನ ಘಮ ಮತ್ತು ಸೂರ್ಯನ ಬೆಳಕು – ಎಲ್ಲವನ್ನೂ ಅನುಭವಿಸುತ್ತಾನೆ. ಇದರ ಫಲವಾಗಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ನರಮಂಡಲ ಶಾಂತವಾಗುತ್ತದೆ ಮತ್ತು ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
Forest Bathing ಲಾಭಗಳೇನು?
ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ: ಅರಣ್ಯದಲ್ಲಿ ಸಮಯ ಕಳೆಯುವುದರಿಂದ ಮೆದುಳಿನ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ.
ಮನಃಸ್ಥಿತಿ ಸುಧಾರಿಸುತ್ತದೆ: ಹಸಿರು ಪರಿಸರ ಮನಸ್ಸಿಗೆ ಶಾಂತಿ ನೀಡುತ್ತದೆ. ಇದು ಕೋಪ, ಚಿಂತೆ ಮತ್ತು ನೆಗೆಟಿವ್ ಭಾವನೆಗಳನ್ನು ತಗ್ಗಿಸಿ, ಧನಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ.
ತೀವ್ರ ಗಮನ ಶಕ್ತಿ (Focus) ಹೆಚ್ಚಿಸುತ್ತದೆ: ಅರಣ್ಯದಲ್ಲಿ ಇರುವ ವೇಳೆ ಮೊಬೈಲ್, ಶಬ್ದ, ತಂತ್ರಜ್ಞಾನದಿಂದ ದೂರವಿರುವುದರಿಂದ ನಮ್ಮ ಗಮನ ಕೇಂದ್ರೀಕರಣ ಶಕ್ತಿ ಹೆಚ್ಚಾಗುತ್ತದೆ.
ರೋಗ ನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ: ಸಸ್ಯಗಳು ಬಿಡುಗಡೆ ಮಾಡುವ “Phytoncides” ಎಂಬ ನೈಸರ್ಗಿಕ ರಾಸಾಯನಿಕಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ನಿದ್ರೆ ಗುಣಮಟ್ಟ ಸುಧಾರಣೆ: ಅರಣ್ಯದ ಶಾಂತ ವಾತಾವರಣ, ಶುದ್ಧ ಗಾಳಿ, ಮತ್ತು ತಂಪನೆಯ ವಾತಾವರಣ ನಿದ್ರೆಯ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.
Forest Bathing ಎನ್ನುವುದು ಯಾವುದೇ ಖರ್ಚಿಲ್ಲದ, ಸುಲಭ ಮತ್ತು ಪರಿಣಾಮಕಾರಿ ಪದ್ದತಿ. ದಿನದ ಕೆಲ ನಿಮಿಷಗಳನ್ನು ನೈಸರ್ಗಿಕ ಪರಿಸರದಲ್ಲಿ ಕಳೆಯುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದೊಡ್ಡ ಲಾಭ ಸಿಗುತ್ತದೆ. ಜಪಾನ್ ಇದನ್ನು ತಮ್ಮ ಉದ್ಯೋಗಜೀವನದ ಒತ್ತಡ ನಿರ್ವಹಣೆಯ ಒಂದು ಭಾಗವನ್ನಾಗಿ ಮಾಡಿಕೊಂಡಿದೆ.
ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ನಗರಜೀವನದ ತೀವ್ರ ವೇಗ — ಇವೆಲ್ಲವೂ ನಮ್ಮ ಮಾನಸಿಕ ಸಮತೋಲನವನ್ನು ಹಾಳುಮಾಡುತ್ತವೆ. ಈ ಸಂದರ್ಭದಲ್ಲಿ ಕಾಡು ಒಂದಿಷ್ಟು ಹೊತ್ತು ಸಮಾಧಾನವನ್ನು ಕೊಡುವಂತೆ ಕೆಲಸ ಮಾಡುತ್ತದೆ.