ಒತ್ತಡ ಉಂಟಾದಾಗ ಉತ್ಪತ್ತಿಯಾಗುವ ನೈಸರ್ಗಿಕ ಭಾವನಾತ್ಮಕ ಪ್ರತಿಕ್ರಿಯೆಯೆಂದರೆ ಅದು ಆತಂಕ. ಆದರೆ ಅದು ದೀರ್ಘಕಾಲದವರೆಗೆ ಉಂಟಾದಾಗ, ಅದು ದೈನಂದಿನ ಜೀವನದಲ್ಲಿ ಹಸ್ತಕ್ಷೇಪ ಮಾಡಬಹುದು. ಇದು ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆ ಆದರೆ ತಜ್ಞರು ಹೇಳುವಂತೆ ಯೋಗವು ಮನಸ್ಸನ್ನು ಶಾಂತಗೊಳಿಸುವ, ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುವ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುವ ಮೂಲಕ ಆತಂಕವನ್ನು ನಿರ್ವಹಿಸುವ ಅಸಾಧಾರಣವಾಗಿ ಶಕ್ತಿಯಾಗಿದೆ.
ಬಾಲಾಸನ
ಇದು ವಿಶ್ರಾಂತಿ ಭಂಗಿ, ನಿಯಂತ್ರಿತ ಉಸಿರಾಟವು ಶಾಂತ ಸ್ಥಿತಿಯನ್ನು ಪುನಃಸ್ಥಾಪಿಸುತ್ತದೆ.
ಅಧೋಮುಖ ಶ್ವಾನಾಸನ
ಇದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕುತ್ತಿಗೆ ಮತ್ತು ಭುಜಗಳಲ್ಲಿ ಬಲವನ್ನು ಹೆಚ್ಚಿಸುತ್ತದೆ. ಕಾಲುಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ
ಪಶ್ಚಿಮೋತ್ತಾಸನ
ಇದು ಒತ್ತಡ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.
ಸಿದ್ಧೋಹುಮ್ ಕ್ರಿಯಾ
ಈ ಅಭ್ಯಾಸವು ನಿಮ್ಮ ಮನಸ್ಸಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಮನಸ್ಸನ್ನು ಬಲಪಡಿಸುತ್ತದೆ. ಇದು ನಿಮ್ಮಲ್ಲಿ ಎಂತಹ ಶಕ್ತಿಯನ್ನು ನಿರ್ಮಿಸುತ್ತದೆ ಎಂದರೆ ನೀವು ಯಾವುದೇ ರೀತಿಯ ಆತಂಕ, ಒತ್ತಡ ಎದುರಿಸುತ್ತಿದ್ದರೂ ನೀವು ಅದರಿಂದ ಹೊರಬರುತ್ತೀರಿ.