MENTAL HEALTH | ಈ 6 ಗುಣಗಳು ನಿಮ್ಮಲ್ಲಿದ್ದರೆ ನೀವು ಮೆಂಟಲಿ ಸ್ಟ್ರಾಂಗ್‌ ಇದ್ದೀರಿ ಎಂದರ್ಥ!

ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವು ನಮ್ಮ ಪೂರ್ಣ ಯೋಗಕ್ಷೇಮದ ಪ್ರಮುಖ ಭಾಗ. ನಮ್ಮ ದೇಹ ಹೇಗೆ ದಣಿಯುತ್ತದೆಯೋ ಅದೇ ರೀತಿ ಭಾವನಾತ್ಮಕವಾಗಿಯೂ ನಾವು ಕೆಲವೊಮ್ಮೆ ಕುಗ್ಗಿ ಹೋಗುತ್ತೇವೆ. ಕೆಲವರು ಅವರಿಗೆ ಅರಿವಿಲ್ಲದಂತೆಯೇ ಮಾನಸಿಕವಾಗಿ ತುಂಬಾನೇ ಸದೃಢರಾಗಿರುತ್ತಾರೆ. ಹಾಗಾದರೆ ನಾವು ಮೆಂಟಲಿ ಸ್ಟ್ರಾಂಗ್‌ ಆಗಿದ್ದೇವೆ ಎಂಬುದನ್ನು ಹೇಗೆ ತಿಳಿಯೋದು? ನಿಮ್ಮಲ್ಲಿ ಈ ಗುಣಗಳಿದ್ರೆ ನೀವು ಮೆಂಟಲಿ ಸ್ಟ್ರಾಂಗ್‌ ಇದ್ದೀರಾ ಎಂದು ಅರ್ಥ.

ಭಾವನೆ ವ್ಯಕ್ತಪಡಿಸುವುದು
ಖುಷಿ, ನೋವು ಈ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಬೇಕು. ಅದನ್ನು ಹಾಗೆ ಇಟ್ಟುಕೊಂಡರೆ ಮನಸ್ಸು ಭಾರವಾಗುತ್ತದೆ. ಹೀಗಾಗಿ ಯಾರು ತಮ್ಮ ಭಾವನೆಗಳನ್ನು ಆರಾಮವಾಗಿ ವ್ಯಕ್ತಪಡಿಸುವರೋ ಅವರು ಮಾನಸಿಕವಾಗಿ ಕೂಡ ಆರೋಗ್ಯವಾಗಿರುತ್ತಾರೆ.

ಶಾಂತವಾಗಿರುವುದು
ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಇರುವ ನಿಮ್ಮ ಶಾಂತ ಗುಣ ಕೂಡ ನೀವು ಮಾನಸಿಕವಾಗಿ ಎಷ್ಟು ಸಬಲರು ಎಂಬುವುದರ ಸಂಕೇತ.

ವೈಫಲ್ಯಗಳನ್ನು ನಿಭಾಯಿಸುವುದು
ಕಷ್ಟ ಬಂದಾಗ ಅಥವಾ ಜೀವನದಲ್ಲಿ ಹಿನ್ನಡೆಯಾದಾಗ ನೀವು ಅದರಿಂದ ಹಿಂದೆ ಸರಿಯದೇ ಅದನ್ನು ನಿಭಾಯಿಸುವ ಗುಣಲಕ್ಷಣ ನೀವು ಹೊಂದಿರುವುದು.

ನಿರ್ಧಾರ ಬದಲಾವಣೆ
ನೀವು ಇತರರ ವಿನಂತಿಗಳು ಅಥವಾ ಅಗತ್ಯಗಳನ್ನು ಪೂರೈಸಲು ಅಥವಾ ಸರಿಹೊಂದಿಸಲು ನಿಮ್ಮ ನಿರ್ಧಾರ ಅಥವಾ ಮನಸ್ಸನ್ನು ಬದಲಾಯಿಸುವ ನಿಮ್ಮ ಗುಣ ನೀವು ಮಾನಸಿಕವಾಗಿ ಸಬಲರಿದ್ದೀರಿ ಎಂಬುದನ್ನು ಸೂಚಿಸುತ್ತದೆ.

ದಯೆ ಹೊಂದಿರುವುದು
ಏನನ್ನೂ ಬಯಸದೇ ಇತರರ ಮೇಲೆ ದಯೆ, ಕರುಣೆಯನ್ನು ತೋರುವ ಗುಣವಿದ್ದರೆ ನೀವು ಖಂಡಿತವಾಗಿ ಮಾನಸಿಕವಾಗಿ ಸಬಲರಿದ್ದೀರಿ ಎಂದರ್ಥ.

ತಾಳ್ಮೆ
ಮನುಷ್ಯನ ಮನಸ್ಸು ನಿಶ್ಚಲವಾಗಿರಲು ತಾಳ್ಮೆ ಕೂಡ ಮುಖ್ಯ. ನಿಮ್ಮ ಜೀವನದ ನಿರೀಕ್ಷೆಗಳು ಮತ್ತು ಸಮಸ್ಯೆಗಳ ಬಗ್ಗೆ ನೀವು ತಾಳ್ಮೆಯಿಂದಿರುವಾಗ ಹೆಚ್ಚಿನ ಗಡಿಬಿಡಿಯಿಲ್ಲದ ಜೀವನವನ್ನು ನೀವು ಪಡೆಯುತ್ತೀರಿ. ಹೆಚ್ಚು ತಾಳ್ಮೆ ಹೊಂದಿರುವ ವ್ಯಕ್ತಿ ಮಾನಸಿಕವಾಗಿ ಕೂಡ ಶಕ್ತನಾಗಿರುತ್ತಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!