ಖಿನ್ನತೆ ಎಂದರೆ ಕೇವಲ ಮನಸ್ಸಿನಲ್ಲಿ ಉಂಟಾಗುವ ಸಮಸ್ಯೆ ಎಂದು ನಾವು ಅನೇಕ ಬಾರಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಇತ್ತೀಚೆಗೆ ನಡೆದ ಸಂಶೋಧನೆಯೊಂದು ಇದಕ್ಕಿಂತ ಇನ್ನೂ ಆಳವಾದ ಕಾರಣವನ್ನು ಪತ್ತೆಹಚ್ಚಿದೆ. ಅದು ಎಂದರೆ– ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳ (oral microbiome) ಸಮತೋಲನದ ಕೊರತೆ. ಇದೂ ಕೂಡ ಖಿನ್ನತೆ ಉಂಟಾಗೋದಕ್ಕೆ ಕಾರಣವಂತೆ.
ನ್ಯೂಯಾರ್ಕ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸಮತೋಲನದ ಕೊರತೆಯು ಖಿನ್ನತೆಯ ತೀವ್ರತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. BMC Oral Health ಪತ್ರಿಕೆಯಲ್ಲಿ ಪ್ರಕಟವಾದ ಈ ಅಧ್ಯಯನವು 2009 ರಿಂದ 2012ರ ನಡುವೆ ಸಂಗ್ರಹಿಸಲಾದ ಲಾಲಾರಸ ಮಾದರಿಗಳು ಮತ್ತು ಖಿನ್ನತೆಗೆ ಸಂಬಂಧಪಟ್ಟ ಪ್ರಶ್ನಾವಳಿಗಳ ಆಧಾರವಾಗಿ 15,000ಕ್ಕೂ ಹೆಚ್ಚು ಜನರ ಮೇಲೆ ಸಂಶೋಧನೆ ನಡೆಸಿದೆ.
ಪ್ರಮುಖ ಅಂಶಗಳು:
ಬಾಯಿಯ ಸೂಕ್ಷ್ಮಜೀವಿಗಳು ದೇಹದ ರೋಗನಿರೋಧಕ ಪ್ರತಿಕ್ರಿಯೆ ಮೇಲೆ ಪರಿಣಾಮ ಬೀರುತ್ತವೆ, ಅದು ಖಿನ್ನತೆಯ ಲಕ್ಷಣಗಳಿಗೆ ಕಾರಣವಾಗಬಹುದು.
ಖಿನ್ನತೆಯು ಆಹಾರದ ಅಭ್ಯಾಸ, ನೈರ್ಮಲ್ಯ, ಧೂಮಪಾನ, ಮದ್ಯಪಾನ, ಔಷಧ ಸೇವನೆಗೆ ಸಹ ಕಾರಣವಾಗಬಹುದು.
ಈ ಅಂಶಗಳು ಮೌಖಿಕ ಮೈಕ್ರೊಬೈಯೋಮ್ ಅನ್ನು ಬದಲಾಯಿಸುತ್ತವೆ, ಅದು ಖಿನ್ನತೆಯ ತೀವ್ರತೆಯನ್ನು ಹೆಚ್ಚಿಸಬಹುದು.
ಈ ಅಧ್ಯಯನ ಭವಿಷ್ಯದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ಬಾಯಿಯ ಜೀವಾಣು ಸಮತೋಲನದ ಆಧಾರಿತ ಹೊಸ ಮಾರ್ಗದರ್ಶನ ಒದಗಿಸಬಹುದಾದ ಸಾಧ್ಯತೆಯಿದೆ.
ಆದ್ದರಿಂದ, ಆರೋಗ್ಯಕರ ಬಾಯಿಯ ನೈರ್ಮಲ್ಯ, ಸರಿಯಾದ ಆಹಾರ ಮತ್ತು ಜೀವನಶೈಲಿ ಕೇವಲ ದಂತ ಆರೋಗ್ಯವಷ್ಟೇ ಅಲ್ಲ, ಮನಃಸ್ಥಿತಿಗೂ ಬಹುಮುಖ್ಯವಾಗಿದೆ.