ವ್ಯಕ್ತಿಯು ದೃಢವಾಗಿ ಕಾಣಿಸಿದರೂ, ಆತನ ಅಂತರಂಗದಲ್ಲಿ ತತ್ತರದ ಭಾವನೆಗಳು ಉಂಟಾಗಿರಬಹುದು. ವಿಶೇಷವಾಗಿ ಪುರುಷರು ತಮ್ಮ ಭಾವನೆಗಳನ್ನು ಬಹಿರಂಗಪಡಿಸುವುದರಲ್ಲಿ ಹಿಂದೇಟು ಹಾಕುತ್ತಾರೆ, ಹೀಗಾಗಿ ಅವರ ಮಾನಸಿಕ ದುರ್ಬಲತೆ ಬಹುತೇಕ ಕಾಣಿಸಿಕೊಳ್ಳುವುದಿಲ್ಲ. ಕೆಲವೊಂದು ನಿತ್ಯಜೀವನದ ನಡವಳಿಕೆಗಳು ಮಾತ್ರ ಅವರ ಅಂತರಂಗವನ್ನು ಸ್ಪಷ್ಟಪಡಿಸಬಹುದು.
ತಕ್ಷಣ ಸಂಬಂಧ ಮುರಿದುಕೊಳ್ಳುವುದು ಅಥವಾ ಮುಖಾಮುಖಿಯಾಗಿ ಮಾತನಾಡುವುದನ್ನು ತಪ್ಪಿಸುವುದು:
ಯಾವುದೇ ಸಂಘರ್ಷ ಎದುರಾದಾಗ ವ್ಯಕ್ತಿಯು ಮೌನವಾನಾಗುವುದು, ಎಲ್ಲವೂ ಸರಿ ಎಂದು ನಟನೆ ಮಾಡುವುದನ್ನು ಮನಸ್ಸಿನ ಶಾಂತಿ ಎಂದಲ್ಲ, ಅಸಹಾಯಕತೆ ಎಂದು ತಿಳಿಯಬೇಕು. ಇದರ ಹಿಂದೆ ಭಯ ಮತ್ತು ಆತಂಕ ತಲೆ ಎತ್ತಿರಬಹುದು.
ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವುದು:
ತಮ್ಮ ಜವಾಬ್ದಾರಿಯನ್ನು ಇತರರ ಮೇಲೆ ಮುಂದೂಡುವುದು ಪುರುಷನಲ್ಲಿ ದೃಢತೆಯ ಕೊರತೆ ತೋರಿಸುತ್ತದೆ. ಇದು ನಿರ್ಣಯಶಕ್ತಿಯ ಕೊರತೆಗೆ ಜೋತೆಗೆ ಆತ್ಮವಿಶ್ವಾಸದ ಕೊರತೆಯೂ ಆಗಿರಬಹುದು.
ಸದಾ ಇತರರಿಗೆ ಮೆಚ್ಚುಗೆಯಾಗಲು ಪ್ರಯತ್ನ:
ಬಾಸ್ ಅಥವಾ ಸ್ನೇಹಿತರಿಗೆ ಖುಷಿಪಡಿಸಲು ಅತಿಯಾಗಿ ನಗುವುದು, ಎಲ್ಲರಿಗಿಂತ ಒಳ್ಳೆಯವನೆನಿಸುವ ತುಡಿತ, ವ್ಯಕ್ತಿತ್ವದ ಸ್ಥಿರತೆಗೆ ಧಕ್ಕೆಯಾಗಬಹುದು.
ದುರ್ಬಲತೆ ಮುಚ್ಚಲು ಹಾಸ್ಯ ಬಳಸುವುದು:
ನೋವಿನ ಮೇಲೆ ಹಾಸ್ಯದ ಪರದೆಯನ್ನು ಎಳೆಯುವುದು ಶಕ್ತಿಯ ಸೂಚಕವಲ್ಲ. ಇದು ಭಾವನಾತ್ಮಕ ಸಂಪರ್ಕ ಕಡಿತಗೊಳಿಸುತ್ತದೆ. ಪ್ರತಿ ಗಂಭೀರ ಕ್ಷಣವೂ ಪಂಚ್‌ಲೈನ್ ಆಗಿ ತಿರುಚುತ್ತಾರೆ. ಏಕೆಂದರೆ ಅವರು ತಮ್ಮತನವನ್ನು ತೋರಿಸಿಕೊಳ್ಳಲು ಹೆದರುತ್ತಾರೆ.
”ಇಲ್ಲ” ಎನ್ನಲು ಪರದಾಡುವುದು
ಮಾನಸಿಕ ದೌರ್ಬಲ್ಯ ಹೊಂದಿರುವ ಪುರುಷರು ಸಾಮಾನ್ಯವಾಗಿ “ಇಲ್ಲ” ಎಂದು ಹೇಳಲು ಪರದಾಡುತ್ತಾರೆ. ಏಕೆಂದರೆ ಹಾಗೆ ಹೇಳುವುದನ್ನು ಸ್ವಾರ್ಥ ಎಂದು ತಪ್ಪಾಗಿ ಭಾವಿಸುತ್ತಾರೆ.
ಮಾನಸಿಕ ದೃಢತೆ ಎಂದರೆ ಭಾವನೆಗಳನ್ನು ಒಪ್ಪಿಕೊಳ್ಳುವುದು, ಸಹಾಯ ಕೇಳುವುದು ಮತ್ತು ಅಂತಃಕರಣದ ಶಕ್ತಿಯನ್ನು ಅರಿತು ಜೀವನದಲ್ಲಿ ಬೆಳೆಯುವುದು ಉತ್ತಮ.