ಬೆಲಾರಸ್ ಮಧ್ಯಸ್ಥಿಕೆ ಯಶಸ್ವಿ: ದಂಗೆಯಿಂದ ಹಿಂದೆ ಸರಿದ ವ್ಯಾಗ್ನರ್ ಗುಂಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದಲ್ಲಿ ಸಂಚಲನ ಮೂಡಿಸಿದ್ದ ದಂಗೆ ಕೊನೆಗೂ ತಣಿದಿದೆ. ವ್ಯಾಗ್ನರ್ ಗ್ರೂಪ್ ಬಂಡಾಯದ ಬಗ್ಗೆ  ಆ ಗುಂಪಿನ ಮುಖ್ಯಸ್ಥ ಪ್ರಿಗೊಝಿನ್ ಮಾಸ್ಕೋ ಕಡೆಗೆ ತನ್ನ ಪಡೆಗಳನ್ನು ಮುನ್ನಡೆಸುವುದಾಗಿ ಶನಿವಾರ ಘೋಷಿಸಿದರು. ಆದರೆ ರಷ್ಯಾದ ಮಿತ್ರರಾಷ್ಟ್ರ ಬೆಲಾರಸ್ ರಷ್ಯಾದಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಸಹಾಯ ಮಾಡಿತು. ಬೆಲಾರಸ್‌ನ ಮಧ್ಯಸ್ಥಿಕೆಯೊಂದಿಗೆ ವ್ಯಾಗ್ನರ್ ಗ್ರೂಪ್ ಮತ್ತು ರಷ್ಯಾದ ಸರ್ಕಾರದ ನಡುವೆ ಸಮನ್ವಯವನ್ನು ಸಾಧಿಸಲಾಯಿತು.

ಪ್ರಿಗೋಜಿನ್ ವಿರುದ್ಧ ರಷ್ಯಾ ತಂದಿರುವ ದೇಶದ್ರೋಹದ ಆರೋಪಗಳನ್ನು ಹಿಂಪಡೆಯಲು ಪುಟಿನ್ ಸರ್ಕಾರ ಸಿದ್ಧವಾಗಿದೆ. ಆತನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕೈಬಿಡುವುದಾಗಿ ಕ್ರೆಮ್ಲಿನ್ ಶನಿವಾರ ಹೇಳಿದೆ. ರಕ್ತಪಾತ ಮತ್ತು ಆಂತರಿಕ ಸಂಘರ್ಷಗಳನ್ನು ತಪ್ಪಿಸುವುದು ಅಂತಿಮ ಗುರಿಯಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಧ್ಯಸ್ಥಿಕೆ ವಹಿಸಿ ಎರಡೂ ಕಡೆಯ ನಡುವಿನ ಒಪ್ಪಂದಕ್ಕೆ ಸಾಕ್ಷಿಯಾದರು. ವ್ಯಾಗ್ನರ್ ಹೋರಾಟಗಾರರನ್ನು ವಿಚಾರಣೆಗೆ ಒಳಪಡಿಸುವುದಿಲ್ಲ ಎಂದು ಪೆಸ್ಕೋವ್ ಹೇಳಿದರು. ಅವರ ವೀರಾವೇಶದ ಕಾರ್ಯಗಳನ್ನು ನಾವು ಯಾವಾಗಲೂ ಗೌರವಿಸುತ್ತೇವೆ. ವ್ಯಾಗ್ನರ್ ಗ್ರೂಪ್ ತನ್ನ ನೆಲೆಗಳಿಗೆ ಮರಳಲು ಒಪ್ಪಿಕೊಂಡಿದೆ. ದಂಗೆಯಲ್ಲಿ ಭಾಗವಹಿಸದವರಿಗೆ ರಷ್ಯಾದ ಸೈನ್ಯಕ್ಕೆ ಸೇರಲು ಅವಕಾಶ ನೀಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!