ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಪ್ರವಾಸದಲ್ಲಿರುವ ಫುಟ್ಬಾಲ್ನ ವಿಶ್ವಶ್ರೇಷ್ಠ ಆಟಗಾರ ಲಿಯೋನಲ್ ಮೆಸ್ಸಿ ಹೈದರಾಬಾದ್ ಗೆ ಭೇಟಿ ನೀಡಿದ್ದಾರೆ.
ಗೋಟ್ ಇಂಡಿಯಾ ಟೂರ್ನ (GOAT India Tour) ಅಂಗವಾಗಿ ಹೈದರಾಬಾದ್ಗೆ ಆಗಮಿಸಿದ್ದ ಲಿಯೋನಲ್ ಮೆಸ್ಸಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಜೊತೆ ಫುಟ್ಬಾಲ್ ಆಡಿದ್ದಾರೆ.
ಬಳಿಕ ಇಡೀ ಸ್ಟೇಡಿಯಂ ಒಂದು ಸುತ್ತು ಹಾಕಿದ ಮೆಸ್ಸಿ ಅಭಿಮಾನಿಗಳತ್ತ ಚೆಂಡನ್ನ ಕಿಕ್ ಮಾಡಿದ್ರು. ಫುಟ್ಬಾಲ್ ದಿಗ್ಗಜ ಆಟಗಾರನನ್ನ ಹತ್ತಿರದಿಂದ ಕಣ್ತುಂಬಿಕೊಂಡ ಹೈದರಾಬಾದ್ ಮಂದಿ ಫುಲ್ ಖುಷ್ ಆಗಿದ್ದಾರೆ.
ಇನ್ನು, ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭೇಟಿಯಾದರು.

ಹೈದರಾಬಾದ್ನಲ್ಲಿ ಮೆಸ್ಸಿ ಮೇನಿಯಾ
ಕೊಲ್ಕತ್ತಾ ಭೇಟಿ ಬಳಿಕ ಲಿಯೋನಲ್ ಮೆಸ್ಸಿ ಅವರು ಸಂಜೆ ಸಂಜೆ 4:30ರ ಸುಮಾರಿಗೆ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದು ನೇರವಾಗಿ ತಾಜ್ ಫಲಕ್ನುಮಾ ಪ್ಯಾಲೆಸ್ ತಲುಪಿದ್ರು. ಅಲ್ಲಿ, ಮೆಸ್ಸಿ ಅವರನ್ನ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಸ್ವಾಗತಿಸಿದ್ರು. ನಂತರ, ಮೆಸ್ಸಿ ಉಪ್ಪಲ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಫುಟ್ಬಾಲ್ ಆಡಿದರು.

ಹೈದರಾಬಾದ್ ಭೇಟಿಗೂ ಮೊದಲು ಕೋಲ್ಕತ್ತಾ ಆಯೋಜಿಸಲಾಗಿದ್ದ ಗೋಟ್ ಇಂಡಿಯಾ ಟೂರ್ನ ಅವ್ಯವಸ್ಥೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಯಾವುದೇ ಅವ್ಯವಸ್ಥೆ ಆಗದಂತೆ ಮುನ್ನೆಚ್ಚರಿಕೆ ವಹಿಸಿತ್ತು. ಉಪ್ಪಳ್ ಸ್ಟೇಡಿಯಂನಲ್ಲಿ ಭದ್ರತಾ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

