January15, 2026
Thursday, January 15, 2026
spot_img

ದೆಹಲಿಯಲ್ಲಿ ಮೆಸ್ಸಿ–ಮೋದಿ ಭೇಟಿ ರದ್ದು! ಅಸಲಿ ಕಾರಣವಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಪ್ರವಾಸದಲ್ಲಿರುವ ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ದೆಹಲಿ ಕಾರ್ಯಕ್ರಮದಲ್ಲಿ ನಿರೀಕ್ಷಿಸಲಾಗಿದ್ದ ಪ್ರಮುಖ ಕಾರ್ಯಕ್ರಮವೊಂದು ಕೊನೆಯ ಕ್ಷಣದಲ್ಲಿ ಕೈ ತಪ್ಪಿದೆ. ‘ದಿ ಗೋಟ್ ಟೂರ್ ಆಫ್ ಇಂಡಿಯಾ’ ಅಂಗವಾಗಿ ಮೂರು ದಿನಗಳ ಕಾಲ ಭಾರತಕ್ಕೆ ಬಂದಿದ್ದ ಮೆಸ್ಸಿ, ತಮ್ಮ ಪ್ರವಾಸದ ಅಂತಿಮ ಹಂತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಹವಾಮಾನ ಅಡಚಣೆ ಮತ್ತು ವೇಳಾಪಟ್ಟಿ ಸಮಸ್ಯೆಯಿಂದ ಈ ಭೇಟಿಯನ್ನು ರದ್ದುಗೊಳಿಸಲಾಗಿದೆ.

ಸೋಮವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಟ್ಟ ಮಂಜು ಆವರಿಸಿಕೊಂಡ ಪರಿಣಾಮ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿತು. ಮುಂಬೈನಿಂದ ದೆಹಲಿಗೆ ಮೆಸ್ಸಿ ಪ್ರಯಾಣಿಸುತ್ತಿದ್ದ ವಿಮಾನವು ಸುಮಾರು ಒಂದು ಗಂಟೆ ತಡವಾಗಿ ಆಗಮಿಸಿತು. ಮಂಜಿನ ಪರಿಣಾಮವಾಗಿ 60ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, ಕೆಲವನ್ನು ಬೇರೆಡೆಗೆ ತಿರುಗಿಸಲಾಯಿತು. ಇದರ ಪರಿಣಾಮವಾಗಿ ಮೆಸ್ಸಿಯ ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಅನಿವಾರ್ಯವಾಯಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೆಸ್ಸಿಯ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಬೆಳಗ್ಗೆಯಿಂದಲೇ ಸೇರಿದ್ದರೂ, ವಿಮಾನ ವಿಳಂಬದ ಹಿನ್ನೆಲೆಯಲ್ಲಿ ಪ್ರದರ್ಶನವೂ ತಡವಾಗಿ ಆರಂಭವಾಯಿತು. ಇದೇ ಕಾರಣದಿಂದ ಮೆಸ್ಸಿ–ಮೋದಿ ಭೇಟಿ ನಡೆಯಲಿಲ್ಲ ಎಂದು ತಿಳಿದುಬಂದಿದೆ. ಇದಲ್ಲದೆ, ಪ್ರಧಾನಿ ಮೋದಿ ಈಗಾಗಲೇ ಓಮನ್, ಇಥಿಯೋಪಿಯಾ ಹಾಗೂ ಜೋರ್ಡಾನ್ ಪ್ರವಾಸಕ್ಕೆ ಹೊರಟಿರುವುದರಿಂದ ಭಾನುವಾರವೇ ಸಭೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿತ್ತು.

Most Read

error: Content is protected !!