March 15, 2026
Sunday, March 15, 2026
spot_img

25 ವರ್ಷಗಳ ಶಿವಸೇನೆ ಆಡಳಿತ ಅಂತ್ಯ: ಮುಂಬೈ ಪಾಲಿಕೆಯ ಮೇಯರ್ ಆಗಿ ಕೇಸರಿ ಪಕ್ಷದ ರಿತು ತಾವ್ಡೆ ಆಯ್ಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೃಹತ್ ಮುಂಬೈ ಮಹಾನಗರ ಪಾಲಿಕೆಯ (BMC) ಮೇಯರ್ ಸ್ಥಾನಕ್ಕೆ ಬಿಜೆಪಿಯ ರಿತು ತಾವ್ಡೆ ಆಯ್ಕೆಯಾಗಿದ್ದು, ಶಿವಸೇನೆ ನಾಯಕ ಸಂಜಯ ಶಂಕರ ಘಾಡಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಇದರೊಂದಿಗೆ ಕಳೆದ 25 ವರ್ಷಗಳಿಂದ ಶಿವಸೇನೆ ಅಧಿಕಾರದಲ್ಲಿದ್ದ ತಿಷ್ಠಿತ ಹುದ್ದೆ ಮೊದಲ ಬಾರಿಗೆ ಬೇರೆ ಪಕ್ಷದ ಪಾಲಾದಂತಾಗಿದೆ.

ಘಾಟ್‌ಕೋಪರ್‌ ನ ಕಾರ್ಪೊರೇಟರ್ ಆಗಿರುವ ರಿತು ತಾವ್ಡೆ ಈ ಹಿಂದೆ ಬಿಎಂಸಿಯ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜನವರಿ 15ರಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 5ರಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾದ ಶಿವಸೇನೆ ನಾಯಕ ಸಂಜಯ ಶಂಕರ ಘಾಡಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಶಿವಸೇನೆಯು ತನ್ನ ನಾಲ್ವರು ಕಾರ್ಪೊರೇಟರ್‌ಗಳಿಗೆ ಅವಕಾಶ ನೀಡುವ ಸಲುವಾಗಿ ಉಪಮೇಯರ್ ಅವಧಿಯನ್ನು ಹಂಚಿಕೆ ಮಾಡಿದೆ.

227 ಸದಸ್ಯ ಬಲದ ಬಿಎಂಸಿಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ (ಶಿಂಧೆ ಬಣ) 29 ಸ್ಥಾನಗಳನ್ನು ಗೆದ್ದಿದೆ. ಈ ಆಡಳಿತಾರೂಢ ಮೈತ್ರಿಕೂಟವು ಒಟ್ಟು 118 ಸದಸ್ಯರ ಬಲದೊಂದಿಗೆ ಮ್ಯಾಜಿಕ್ ನಂಬರ್ (114) ದಾಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !