ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವುದಾಗಿ ಮಂಗಳವಾರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
“ಮಧ್ಯಪ್ರದೇಶದಲ್ಲಿ ನಿನ್ನೆಯವರೆಗೆ 336.5 ಮಿಮೀ ಮಳೆ ದಾಖಲಾಗಿದೆ, ಮುಂದಿನ 24 ಗಂಟೆಗಳಲ್ಲಿ ಭೋಪಾಲ್, ಇಂದೋರ್ ಮತ್ತು ಉಜ್ಜಯಿನಿ ವಿಭಾಗದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ” ಎಂದು ತಿಳಿಸಿದೆ.
ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆಯಿರುವ ಕೆಲವು ಜಿಲ್ಲೆಗಳಲ್ಲಿ ರಾಜ್‌ಗಢ್, ಸೆಹೋರ್, ರೈಸೆನ್, ಭೋಪಾಲ್, ವಿದಿಶಾ, ಅಗರ್ ಮಾಲ್ವಾ, ದೇವಾಸ್, ಇಂದೋರ್, ಝಬುವಾ, ಧಾರ್, ಖಾಂಡ್ವಾ ಮತ್ತು ಖಾರ್ಗೋನ್ ಸೇರಿವೆ.
ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯ ಕುರಿತು ಮಾಹಿತಿ ನೀಡಿದ ಐಎಂಡಿ ನರ್ಮದಾಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು 77 ಮಿಮೀ, ರೈಸನ್ 56 ಮಿಮೀ, ಉಜ್ಜಯಿನಿ 42 ಮಿಮೀ ಮತ್ತು ಮಂಡ್ಲಾ 36 ಮಿಮೀ ಮಳೆ ದಾಖಲಾಗಿದೆ.
ಅದೇ ರೀತಿ ಮಂದಸೌರ್, ಸೆಹೋರ್, ಇಂದೋರ್, ಉಜ್ಜಯಿನಿ, ಜಬಲ್‌ಪುರ್, ಅನುಪ್ಪುರ್, ಸಾಗರ್ ಮತ್ತು ಚಿಂದ್ವಾರ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ.