23,000 ಕ್ಕೂ ಹೆಚ್ಚು ನಕಲಿ ಫೇಸ್‌ಬುಕ್ ಖಾತೆಗಳನ್ನು ಡಿಲೀಟ್ ಮಾಡಿದ ಮೆಟಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ಷಾಂತರ ಬಳಕೆದಾರರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ವ್ಯಾಪಕ ಸೈಬರ್ ವಂಚನೆ ಚಟುವಟಿಕೆಗಳ ವಿರುದ್ಧ ಮೆಟಾ ತೀವ್ರ ಕ್ರಮ ಕೈಗೊಂಡಿದ್ದು, 23,000 ಕ್ಕೂ ಹೆಚ್ಚು ನಕಲಿ ಫೇಸ್‌ಬುಕ್ ಪುಟಗಳು ಮತ್ತು ಖಾತೆಗಳನ್ನು ತೆಗೆದುಹಾಕಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಂಚನೆ ಚಟುವಟಿಕೆಯಲ್ಲಿ ಪ್ರಸಿದ್ಧ ಯೂಟ್ಯೂಬರ್‌ಗಳು, ಕ್ರಿಕೆಟ್ ತಾರೆಯರು ಮತ್ತು ಉದ್ಯಮಿಗಳ ಡೀಪ್‌ಫೇಕ್ ವೀಡಿಯೋಗಳನ್ನು ಬಳಸಿ, ಹೂಡಿಕೆ ಸಲಹೆಗಳ ನೆಪದಲ್ಲಿ ಜನರನ್ನು ಮೋಸಗೊಳಿಸಲಾಗುತ್ತಿತ್ತು.

ವಂಚಕರು ಜನಪ್ರಿಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ವೀಡಿಯೋಗಳನ್ನು ತಯಾರಿಸಿ ಹೂಡಿಕೆಗೆ ಆಹ್ವಾನಿಸುತ್ತಿದ್ದರು. ಈ ಮೂಲಕ ಜನರಲ್ಲಿ ನಂಬಿಕೆ ಉಂಟುಮಾಡಿ ಅವರ ಹಣವನ್ನು ಎತ್ತಿಹಾಕುತ್ತಿದ್ದರು.

ಮಾರ್ಚ್ ತಿಂಗಳಲ್ಲಿ ಇಂತಹ 23,000 ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ಮತ್ತು ಪುಟಗಳನ್ನು ತೆಗೆದುಹಾಕಲಾಗಿದೆ. ಮೆಟಾ ತನ್ನ ವೇದಿಕೆಗಳಲ್ಲಿ ಸುರಕ್ಷತೆಯ ಮಟ್ಟ ಹೆಚ್ಚಿಸಲು ತಂತ್ರಜ್ಞಾನ, ನಿಯಮಗಳು ಮತ್ತು ಸಾರ್ವಜನಿಕ ಜಾಗೃತಿಗೆ ಒತ್ತು ನೀಡುತ್ತಿದೆ ಎಂದು ತಿಳಿಸಿದೆ.

ಭಾರತದಲ್ಲಿ ಮಾತ್ರ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 375 ಮಿಲಿಯನ್ (37.5 ಕೋಟಿ) ಕ್ಕೂ ಅಧಿಕವಾಗಿದೆ. ಈ ಪ್ರಮಾಣದಲ್ಲಿ ಬಳಕೆದಾರರು ಇರುವುದರಿಂದ ಈ ರೀತಿಯ ಸೈಬರ್ ವಂಚನೆಗಳು ಭಾರತಕ್ಕೆ ದೊಡ್ಡ ಆತಂಕವಾಗಿದೆ. ಕೆಲವರು ತಮ್ಮ ಖಾತೆಗಳು ಡಿಲೀಟ್ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸುವವರೂ ಇದ್ದಾರೆ. ಇನ್ನು ಕೆಲವು ಖಾತೆಗಳಿಗೆ ಆದಾಯ ಬರುತ್ತಿದ್ದಲ್ಲಿ ಅಂತಹ ಖಾತೆಗಳನ್ನು ಡಿಲೀಟ್ ಮಾಡಿದಲ್ಲಿ ಸಾರ್ವಜನಿಕ ಜೀವನದಲ್ಲಿ ಸಾಮಾಜಿಕ ಜಾಲತಾಣದ ಆದಾಯದ ಮೂಲವನ್ನು ಕಡಿತ ಮಾಡಿದಂತಾಗುತ್ತದೆ ಎಂಬ ಆತಂಕ ಕೂಡ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!