ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದ ದೈತ್ಯ ಮೆಟಾ (Meta) ಬುಧವಾರದಿಂದ ಮತ್ತೊಂದು ಸುತ್ತು ಉದ್ಯೋಗಿಗಳನ್ನು (Employees) ಸಾಮೂಹಿಕವಾಗಿ ವಜಾಗೊಳಿಸಲು (Layoff) ಸಿದ್ಧವಾಗಿದೆ.
ಈ ಬಾರಿ ಫೇಸ್‌ಬುಕ್, ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್‌ನ ಸುಮಾರು 4,000ಕ್ಕೂ ಅಧಿಕ ನುರಿತ ಉದ್ಯೋಗಿಗಳ ಮೇಲೆ ಕಣ್ಣು ಇಟ್ಟಿದೆ.
ಕಳೆದ ತಿಂಗಳು ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಏಪ್ರಿಲ್‌ನಲ್ಲಿ ಕಂಪನಿಯ ಸುಮಾರು 10,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಇದೀಗ ಮೆಟಾ ವಜಾ ಪ್ರಕ್ರಿಯೆ ಪ್ರಾರಂಭಿಸಲು ಮುಂದಾಗಿದ್ದು, ಈ ವಾರದೊಳಗೆ 4,000 ಕ್ಕೂ ಅಧಿಕ ನುರಿತ ಉದ್ಯೋಗಿಗಳನ್ನೇ ವಜಾಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯ ಶೇ.13 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸುಮಾರು 11,000 ಉದ್ಯೋಗಿಗಳನ್ನು ಮೆಟಾ ಮೊದಲ ಬಾರಿಗೆ ವಜಾಗೊಳಿಸಿತ್ತು. ಇದೀಗ ಮತ್ತೆ ಕಂಪನಿ ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗುತ್ತಿದೆ.