ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ಚಾಕೋಲೇಟ್ Hersheys ಬಗ್ಗೆ ನೀವೆಲ್ಲ ಕೇಳಿಯೇ ಇರುತ್ತೀರಿ. ಬಹುತೇಕರು ನೆಚ್ಚಿಕೊಳ್ಳೋ ಚಾಕೋಲೆಟ್ ಬ್ರಾಂಡ್ ಅದು. ಆದರೆ ಈ ಕಂಪನಿಯ ಮೇಲೆ ಈಗ ಅಮೆರಿಕದಲ್ಲಿ ಪ್ರಕರಣವೊಂದು ದಾಖಲಾಗಿದೆ. Hershey Co HSY.N ಕಂಪನಿಯು ಹಾನಿಕಾರಕ ಮಟ್ಟದ ಸೀಸ ಮತ್ತು ಕ್ಯಾಡ್ಮಿಯಂ ಹೊಂದಿರುವ ಡಾರ್ಕ್ ಚಾಕೊಲೇಟನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ಗ್ರಾಹಕರು ಮೊಕದ್ದಮೆ ಹೂಡಿದ್ದಾರೆ.
ಹರ್ಷೇಸ್ ನ ಸ್ಪೆಷಲ್ ಡಾರ್ಕ್ ಮಿಲ್ಡ್ಲಿ ಸ್ವೀಟ್ ಚಾಕೊಲೇಟ್, ಲಿಲಿಸ್ ಎಕ್ಸ್‌ಟ್ರಾ ಡಾರ್ಕ್ ಚಾಕೊಲೇಟ್ ಮತ್ತು ಲಿಲಿಸ್ ಎಕ್ಸ್‌ಟ್ರೀಮ್ ಡಾರ್ಕ್ ಚಾಕೊಲೇಟ್ ಗಳಲ್ಲಿ ಲೋಹದಂಶಗಳು ಪತ್ತೆಯಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ನ್ಯೂಯಾರ್ಕ್‌ನ ಸೆಂಟ್ರಲ್ ಇಸ್ಲಿಪ್‌ನಲ್ಲಿರುವ ಫೆಡರಲ್ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಆದರೆ ಹರ್ಷೀಸ್ ಈ ಕುರಿತು ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳ ವರದಿ ತಿಳಿಸಿದೆ.
ಕೆಲ ವರದಿಗಳ ಪ್ರಕಾರ ಡಾರ್ಕ್ ಚಾಕೋಲೇಟ್ ನಲ್ಲಿರುವ antioxidents (ಉತ್ಕರ್ಷಣ ನಿರೋಧಕಗಳು) ಮತ್ತು ಕಡಿಮೆ ಸಕ್ಕರೆಯು ಹೃದಯರಕ್ತನಾಳದ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ ಆದರೆ ಸುಮಾರು 28 ಡಾರ್ಕ್ ಚಾಕೊಲೇಟ್ ಬಾರ್‌ಗಳ ವೈಜ್ಞಾನಿಕ ಪರೀಕ್ಷೆಯ ಫಲಿತಾಂಶಗಳನ್ನು ಗ್ರಾಹಕ ವರದಿಗಳು ಅನಾವರಣಗೊಳಿಸಿದ್ದು ಹರ್ಷೇಸ್ ಡಾರ್ಕ್ ಚಾಕೋಲೇಟ್ ಸೇರಿದಂತೆ ಇತರ ಡಾರ್ಕ್ಚಾಕೋಲೇಟ್ ಗಳಲ್ಲಿ ಸೀಸ ಮತ್ತು ಕ್ಯಾಡ್ಮಿಯಂ ಲೋಹಗಳು ಪತ್ತೆಯಾಗಿವೆ ಎನ್ನಲಾಗಿದೆ.