ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋ ದರ ಇಳಿಕೆ ಸಂಬಂಧ ಸ್ವಲ್ಪ ಬದಲಾವಣೆ ಮಾಡಲಾಗುತ್ತದೆ. ಶೀಘ್ರದಲ್ಲೇ ಪರಿಷ್ಕೃತ ದರ ಪ್ರಕಟಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲೆಲ್ಲಿ 90%, 100% ಜಂಪ್ ಆಗಿದೆಯೋ ಬದಲಾವಣೆ ಮಾಡುತ್ತೇವೆ. ಸ್ವಲ್ಪ ರಿಲೀಫ್ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಾರ್ವಜನಿಕರಿಂದಲೂ ಬಿಎಂಆರ್‌ಸಿಎಲ್ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದ್ದು. ಎಚ್ಚೆತ್ತ ಬಿಎಂಆರ್‌ಸಿಎಲ್ ದರವನ್ನು ಇಳಿಸಲು ಮುಂದಾಗಿದೆ.