ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆ ಹಿನ್ನೆಲೆ ಜನ ಮೆಟ್ರೋ ಸ್ಟೇಷನ್ಸ್ ಕಡೆ ತಲೆಹಾಕುತ್ತಿಲ್ಲ. ಇದರಿಂದಾಗಿ ಬಸ್ ಹಾಗೂ ತಮ್ಮ ವಾಹನಗಳಲ್ಲಿ ಓಡಾಡೋದಕ್ಕೆ ಜನ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ವಾಯುಮಾಲೀನ್ಯ ಹೆಚ್ಚಾಗಿದೆ.
ಜನವರಿಯಲ್ಲಿ ಬಸ್ ದರ ಏರಿಕೆಯ ನಂತರ ಫೆಬ್ರವರಿ 9ರಿಂದ ಮೆಟ್ರೋ ದರ ಏರಿಕೆ ಮಾಡಲಾಯಿತು. ದರ ಏರಿಕೆ ಹಿನ್ನೆಲೆ ಪ್ರತಿನಿತ್ಯ ಸುಮಾರು 80-90 ಸಾವಿರ ಮೆಟ್ರೋ ಪ್ರಯಾಣಿಕರು ಮೆಟ್ರೋದಿಂದ ದೂರವಾಗಿ ದ್ವಿಚಕ್ರ ವಾಹನ, ಕಾರುಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ನಗರದಲ್ಲಿ ಒಂದೆಡೆ ಟ್ರಾಫಿಕ್ ಹೆಚ್ಚಳದ ಜೊತೆಗೆ ವಾಯುಮಾಲಿನ್ಯ ಸಹ ಹೆಚ್ಚಾಗುತ್ತಿದೆ.
ಐಐಎಸ್‌ಸಿ ತಜ್ಞ ಆಶಿಶ್ ವರ್ಮಾ ಅಧ್ಯಯನದಂತೆ 5%ನಷ್ಟು ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, 5%ನಷ್ಟು ಪ್ರಯಾಣಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಇದು ಜನರ ಜೀವನ ಹಾಗೂ ವಾಯುಮಾಲಿನ್ಯದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.