ಹೊಸದಿಗಂತ ವರದಿ,ಗದಗ :
ಬೆಂಗಳೂರಿನಲ್ಲಿ ಮಂಗಳವಾರ ಎಚ್ ಆರ್ ಲೇವೌಟ್ ಹತ್ತಿರ ಕಾಮಗಾರಿ ಹಂತದಲ್ಲಿರುವ ಮೆಟ್ರೊ ಪಿಲ್ಲರ್ ಬಿದ್ದು ಗದಗ ಮೂಲದ ತೇಜಸ್ವಿನಿ ಹಾಗೂ ಮಗ ವಿಹಾನ ಮೃತಪಟ್ಟ ದುರ್ದೈವಿಯಾಗಿದ್ದಾರೆ
ನಗರದ ಸಿದ್ದರಾಮೇಶ್ವರ ಬಡಾವಣೆ ನಿವಾಸಿಗಳಾಗಿದ್ದ ತೇಜಸ್ವಿನಿ, ವಿಹಾನ್ ಅವರು ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಆಗಿದ್ದ ವಿಜಯ್ ಕುಮಾರ್ ಸುಲಾಖೆ ಅವರ ಹಿರಿಯ ಸೊಸೆ, ಮೊಮ್ಮಗ ಆಗಿದ್ದಾರೆ.ವಿಜಯ ಅವರ ಹಿರಿಯ ಮಗ ಸಾಫ್ಟ್ ವೇರ್ ಇಂಜಿನಿಯರ್ ಲೋಹಿತ್ ಸುಲಾಕೆ ಅವರು ಆರು ವರ್ಷದ ಹಿಂದೆ ಬೆಂಗಳೂರಿಗೆ ಶಿಫ್ಟ್ ಆಗಿದ್ದರು.
ಮಂಗಳವಾರ ಲೋಹಿತ್, ಪತ್ನಿ ಹಾಗೂ ಮಗುವಿನೊಂದಿಗೆ ಬೈಕ್ ನಲ್ಲಿ ತೆರಳುತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಸಾವಿನ ಸುದ್ದಿ ಕೇಳಿ ಗದುಗಿನ ನಿವಾಸದ ಅಕ್ಕಪಕ್ಕದ ಮನೆಯ ಜನರು ಆಘಾತಗೊಂಡಿದ್ದಾರೆ. ಮೊನ್ನೆ ಬೆಂಗಳೂರಿಂದ ಬಂದು ಹೋಗಿದ್ದರು.
ತುಂಬಾ ಸಂಭಾವಿತರು ಈ ಏರಿಯಾದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಲೋಹಿತ ಸುಲಾಖೆ ಕುಟುಂಬದ ಒಡನಾಟ ನೆನದೆ ಅಕ್ಕಪಕ್ಕದ ಜನ ಕಣ್ಣಿರಿಟ್ಟರು.