ಧಾರ್ಮಿಕ ಉತ್ಸವದ ಫ್ಲೆಕ್ಸ್‌ನಲ್ಲಿ ಮಿಯಾ ಖಲೀಫಾ ಪೋಟೊ, ಸ್ಥಳೀಯರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಉತ್ಸವದ ವೇಳೆ ಫ್ಲೆಕ್ಸ್​ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಫೋಟೊ ಹಾಕಲಾಗಿದೆ.

ಕುರುವಿಮಲೈನ ನಾಗತಮ್ಮನ್ ಮತ್ತು ಸೆಲ್ಲಿಯಮ್ಮನ್ ದೇವಾಲಯಗಳ ಸಮೀಪದ ಹೋರ್ಡಿಂಗ್​ಗಳನ್ನು ಹಾಕಲಾಗಿತ್ತು. ಅದರಲ್ಲಿ ಕಳಶ ಹೊತ್ತ ಮಿಯಾ ಖಲೀಫಾರ ಚಿತ್ರವೂ ಇದೆ, ದೇವತೆಗಳ ಪಕ್ಕದಲ್ಲಿ ಕಲಶ ಹಿಡಿದಿರುವ ಮಿಯಾ ಫೋಟೊ ಹಾಕಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಬ್ಬದ ಅಲಂಕಾರವಾಗಿ ಹಲವು ಹೋರ್ಡಿಂಗ್​ಗಳಿಗೆ ದೀಪದ ಅಲಂಕಾರ ಮಾಡಲಾಗಿದೆ. ಹೋರ್ಡಿಂಗ್​ ಒಂದರಲ್ಲಿ ಮಿಯಾ ಖಲೀಫಾ ಅವರ ಚಿತ್ರವನ್ನು ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ. ಈ ವಿವಾದಾತ್ಮಕ ಹೋರ್ಡಿಂಗ್‌ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ಥಳೀಯ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪೋಲೀಸರು ಈ ಹೋರ್ಡಿಂಗ್ ತೆಗೆದು ತನಿಖೆ ಆರಂಭಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!