ಹೊಸ ಹೊಟೇಲ್‌ ಆರಂಭಿಸಿದ ಬಿಗ್‌ಬಾಸ್‌ ಖ್ಯಾತಿಯ ಮೈಕಲ್‌, ಹೇಗಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸ್ಪರ್ಧಿಸಿ ಸಾಕಷ್ಟು ಜನಪ್ರಿಯತೆ ಪಡೆದ ಮೈಕಲ್ ಅಜಯ್ ಇದೀಗ ಹೊಟೇಲ್‌ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.
ಮಾಡೆಲ್ ಆಗಿದ್ದ ಮೈಕಲ್‌ ಇದೀಗ ತಮ್ಮದೇ ಬರ್ಗರ್‌ ಪ್ಲೇಸ್‌ ಓಪನ್‌ ಮಾಡಿದ್ದಾರೆ. ಅದರ ಉದ್ಘಾಟನೆ ನಡೆಯುತ್ತಿದೆ. ಇದಕ್ಕೆ ಬಿಗ್ ಬಾಸ್​​ನ ವಿನಯ್ ಗೌಡ, ಕಾರ್ತಿಕ್ ಮಹೇಶ್ ಮೊದಲಾದವರು ಭಾಗಿ ಆಗುತ್ತಿದ್ದಾರೆ.

ಹೊಸ ಹೋಟೆಲ್ ಆರಂಭಿಸಿದ ಮೈಕಲ್ ಅಜಯ್; ಬಿಗ್ ಬಾಸ್ ಮಂದಿಯ ಬೆಂಬಲ - Kannada News | Michael  Ajay Started New Venture Vinay Gowda And Other Supports Entertainment News  In Kannada | TV9 Kannada

ಬೆಂಗಳೂರಿನ ಎಚ್​​ಎಸ್​ಆರ್ ಲೇಔಟ್​ನಲ್ಲಿ ಮೈಕಲ್ ಅವರು ಫುಡ್ ಟ್ರಕ್ ಹೊಂದಿದ್ದಾರೆ. ಇಲ್ಲಿ ವಿವಿಧ ರೀತಿಯ ಬರ್ಗರ್​​ನ ಅವರು ತಯಾರಿಸುತ್ತಾರೆ. ಮನೆಯಲ್ಲೇ ತಯಾರಿಸಿದ ಕೆಚಪ್​ಗಳನ್ನು ಈ ಬರ್ಗರ್ ತಯಾರಿಸಲು ಬಳಕೆ ಮಾಡುತ್ತಾರೆ ಅನ್ನೋದು ವಿಶೇಷ. ಮೈಕಲ್ ಅವರು ಫಿಟ್ನೆಸ್ ಫ್ರೀಕ್. ಈ ಕಾರಣದಿಂದಲೇ ಅವರು ತಯಾರಿಸೋ ಬರ್ಗರ್​ನಲ್ಲಿ ಮೈದಾ ಬಳಕೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಬರ್ಗರ್​ ಸಂಪೂರ್ಣ ಆರೋಗ್ಯಕರ ಅನ್ನೋದು ಅವರ ಹೇಳಿಕೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!