ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತಾ ಮೇಲೆ ಅವರ ತಂಡದವರೇ ತಿರುಗಿ ಬಿದ್ದಿದ್ದಾರೆ, ನೀನು ದೊಡ್ಡ ನೆಗೆಟಿವ್ ಎನರ್ಜಿ ಎಂದು ಮೈಕಲ್ ಸಂಗೀತಾಗೆ ಹೇಳಿದ್ದಾರೆ.
ಬಿಗ್ ಬಾಸ್ ಫಿನಾಲೆಗೆ ಇನ್ನೇನು ಮೂರು ವಾರ ಅಷ್ಟೇ ಬಾಕಿ ಇದೆ ಎನ್ನುವಾಗ ಮನೆಯ ಟಾಸ್ಕ್ ಹಾಗೂ ಕಂಟೆಸ್ಟೆಂಟ್ಸ್ ಬಿಹೇವಿಯರ್ ಬದಲಾಗುತ್ತಿದೆ.
ಬಿಗ್‌ಬಾಸ್ ದುಡ್ಡು ಕೊಟ್ಟು ಸಂಗೀತಾ ಹಾಗೂ ತನಿಶಾಗೆ ತಂಡಕ್ಕೆ ಸ್ಪರ್ಧಿಯನ್ನು ಖರೀದಿ ಮಾಡುವ ಟಾಸ್ಕ್ ನೀಡಲಾಗಿದೆ. ಸಂಗೀತಾ ತಮ್ಮ ಬಜೆಟ್‌ನಲ್ಲಿ ಇರುವ ಹಣದಿಂದ ನಮ್ರತಾ ಮೈಕಲ್ ಡ್ರೋನ್ ಹಾಗೂ ಅವಿನಾಶ್‌ರನ್ನು ಖರೀದಿ ಮಾಡಿದ್ದಾರೆ. ಇದರಿಂದ ತಂಡ ಗೆಲುವು ಸಾಧಿಸಿದೆ. ಆದರೀಗ ಗೆದ್ದ ಹಣವನ್ನು ಸಂಗೀತಾ ಶೇರ್ ಮಾಡೋದಿಲ್ಲ ಎಂದು ಹೇಳಿದ್ದು ಮೈಕಲ್‌ಗೆ ಇಷ್ಟವಾಗಿಲ್ಲ.
ಇದರಿಂದಾಗಿ ಮಾತಿಗೆ ಮಾತು ಬೆಳೆದು ನೀನು ನೆಗೆಟಿವ್ ಎನರ್ಜಿ ಎಂದು ಹೇಳಿದ್ದಾರೆ. ಇಡೀ ಮನೆಯವರೇ ಟಾರ್ಗೆಟ್ ಮಾಡಿ ಎಲ್ಲದಕ್ಕೂ ನೆಗೆಟಿವ್ ಎಂದು ಹೇಳ್ತಿದ್ದಾರೆ ಎಂದು ಸಂಗೀತಾ ಕಣ್ಣೀರಿಟ್ಟಿದ್ದಾರೆ.