9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ ಬರೋಬ್ಬರಿ 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.

2023 ರ ನಂತರದ ಅತಿದೊಡ್ಡ ಉದ್ಯೋಗ ಕಡಿತ ಮಾಡಲು ಮೈಕ್ರೋಸಾಫ್ಟ್‌ ಮುಂದಾಗಿದೆ. ಒಟ್ಟು ಉದ್ಯೋಗಿಗಳ ಪೈಕಿ 4% ಅಥವಾ 9,100 ಜನರನ್ನು ವಜಾಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.

ಜೂನ್ 2024 ರ ಹೊತ್ತಿಗೆ ವಿಶ್ವಾದ್ಯಂತ ಸುಮಾರು 2,28,000 ಉದ್ಯೋಗಿಗಳನ್ನು ಮೈಕ್ರೋಸಾಫ್ಟ್‌ ಹೊಂದಿತ್ತು. ಮೈಕ್ರೋಸಾಫ್ಟ್ ಮೇ ತಿಂಗಳಲ್ಲಿ 6,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ಬಾರಿ ವಿಶೇಷವಾಗಿ ಮಾರಾಟ ವಿಭಾಗದಲ್ಲಿ ಉದ್ಯೋಗ ಕಡಿತಗೊಳಿಸಲು ಮುಂದಾಗಿದೆ.

ಆರ್ಥಿಕ ಅಸ್ಥಿರತೆಯಿಂದಾಗಿ ಕಳೆದ ವರ್ಷದಿಂದ ವೆಚ್ಚಕ್ಕೆ ಕಡಿವಾಣ ಹಾಕಲು ಮೈಕ್ರೋಸಾಫ್ಟ್‌ ಮುಂದಾಗುತ್ತಿದ್ದು ಅದರಲ್ಲಿ ನೌಕರರ ವಜಾಗೊಳಿಸುವ ಕ್ರಮವೂ ಸೇರಿದೆ. ಕಳೆದ ವರ್ಷವೂ ಇದೇ ರೀತಿಯಲ್ಲಿ ಉದ್ಯೋಗ ಕಡಿತ ಮಾಡಿತ್ತು. ಈ ಮೂಲಕ ಕಂಪನಿಯು ತನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನಕ್ಕೆ ಕೈಹಾಕಿತ್ತು.

ಕೃತಕ ಬುದ್ಧಿಮತ್ತೆಯಲ್ಲಿ ಭಾರಿ ಹೂಡಿಕೆ ಮಾಡುತ್ತಿರುವ ಬಿಗ್‌ ಟೆಕ್‌ ಕಂಪನಿಗಳು ಈಗ ಉದ್ಯೋಗ ಕಡಿತಕ್ಕೆ ಕೈಹಾಕಿವೆ. ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ 5% ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿತ್ತು. ಗೂಗಲ್‌ ಕಳೆದ ವರ್ಷ ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!