ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ದಾಳಿ ನಡೆಸಿದ್ದಾರೆ. ಗುಲ್ಮಾರ್ಗ್ ಬಳಿ ಸೇನಾ ವಾಹನದ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಓರ್ವ ನಾಗರೀಕ ಮೃತಪಟ್ಟಿದ್ದರೆ, ಐವರು ಯೋಧರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭಾರತೀಯ ಸೇನೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾರಮುಲ್ಲಾ ನಾಗಿನ್ ಪೋಸ್ಟ್ ಬಳಿ ಈ ದಾಳಿ ನಡೆದಿದೆ. 18 ರಾಷ್ಟ್ರೀಯ ರೈಫಲ್ಸ್ ಯೋಧರು ಬಾರಮುಲ್ಲಾದಲ್ಲಿ ಪ್ಯಾಟ್ರೋಲಿಂಗ್ ನಡೆಸಲು ತೆರಳುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಅಡಗಿ ಕುಳಿತಿದ್ದ ಉಗ್ರರು ಏಕಾಏಕಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಉಗ್ರರ ದಾಳಿ ಆರಂಭಗೊಳ್ಳುತ್ತಿದ್ದಂತೆ, ಯೋಧರು ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಪರಾರಿಯಾಗಿದ್ದಾರೆ.
ಗುಲ್ಮಾರ್ಗ್ ಬಳಿ ಸೇನಾ ವಾಹನದ ಮೇಲೆ ನಡೆದಿರುವ ಉಗ್ರ ದಾಳಿ ಕುರಿತು ಭಾರತೀಯ ಸೇನೆ ಅಲರ್ಟ್ ಆಗಿದೆ. ಇಡೀ ಪ್ರದೇಶ ಸುತ್ತುವರಿದು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಇತ್ತ ಗಾಯಾಳು ಯೋಧರು ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.