ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಸೀನಾ ಅವರ ಪುತ್ರ ಸಾಜಿಬ್ ವಾಜಿದ್ ಹೇಳಿದ್ದಾರೆ.
ನಮ್ಮ ತಾಯಿ ದೇಶ ತೊರೆದಿದ್ದಾರೆ. ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಮತ್ತೆ ರಾಜಕೀಯಕ್ಕೆ ಹೋಗುವುದಿಲ್ಲ. ಸುರಕ್ಷತೆಯ ದೃಷ್ಟಿಯಿಂದ ನಮ್ಮ ತಾಯಿ ದೇಶ ತೊರೆದಿದ್ದಾರೆ ಎಂದು ಸಾಜಿಬ್ ವಾಜಿದ್ ಹೇಳಿದ್ದಾರೆ.
ಸೋಮವಾರ ರಾಜೀನಾಮೆ ನೀಡಿದ ಶೇಖ್ ಹಸೀನಾ ಅವರು ತಮ್ಮ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದರು, ಸಿ-130 ಸೇನಾ ವಿಮಾನದಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿರುವ ಹಿಂಡನ್ ಏರ್ ಬೇಸ್ಗೆ ಆಗಮಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಯುಕೆ ಪೌರತ್ವ ಹೊಂದಿರುವ ಹಸೀನಾ ಅವರ ಸಹೋದರಿ ರಹಾನಾ ಅವರೊಂದಿಗೆ ಹಸೀನಾ ಅವರನ್ನು ಭಾರತದಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.