ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಭದ್ರತಾ ಪಡೆಯಿಂದ ಎನ್‌ಕೌಂಟರ್ ಆರಂಭವಾಗಿದೆ.
ಚೋಟಿಗಮ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಎನ್‌ಕೌಂಟರ್ ಆರಂಭವಾಗಿತ್ತು. ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದು, ಪ್ರಸ್ತುತ ಭಾರತೀಯ ಸೇನೆ ಭಯೋತ್ಪಾದಕರಿಗೆ ತಿರುಗೇಟು ನೀಡುತ್ತಿದೆ.
ಈವರೆಗೂ ಎರಡೂ ಕಡೆಯಿಂದ ಯಾವುದೇ ಜೀವಹಾನಿ ಬಗ್ಗೆ ಮಾಹಿತಿ ಬಂದಿಲ್ಲ.