ಹಾಲಿನ ದರ ಏರಿಕೆಯಾಗಿಲ್ಲ, ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ: ಸಿಎಂ ಸಿದ್ದು ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಲಿನ ದರ ಏರಿಕೆ ಮಾಡಿಲ್ಲ, ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಅವಧಿಯಲ್ಲಿ 9 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿತ್ತು. ಈ ವರ್ಷ ಅದು 99 ಲಕ್ಷ ಲೀಟರ್ ಆಗಿದೆ. ಆದ್ದರಿಂದ, ರೈತರಿಂದ ಹೆಚ್ಚುವರಿ ಹಾಲು ಬೇಡ ಎನ್ನಲು ಸಾಧ್ಯವಿಲ್ಲ. ಮಾರುಕಟ್ಟೆ ಅಭಿವೃದ್ಧಿ ಅತ್ಯಗತ್ಯ.

ಈ ಕಾರಣಕ್ಕಾಗಿ ನಾವು ಅರ್ಧ ಲೀಟರ್ ಪ್ಯಾಕ್‌ಗೆ 50 ಎಂಎಲ್ ಹೆಚ್ಚು ಸೇರಿಸುತ್ತೇವೆ. 50 ಎಂಎಲ್ ಹಾಲಿಗೆ 2 ರೂ. 10 ಪೈಸೆ ಆಗಿರುತ್ತದೆ. ಅದಕ್ಕೆ 2 ರೂ. ಮಾಡಿದ್ದೇವೆ ಇದು ಬೆಲೆಗಳನ್ನು ಹೇಗೆ ಹೆಚ್ಚಿಸುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!