ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ಜನ್ಮದಿನಕ್ಕೆ ಲಕ್ಷಾಂತರ ಮಂದಿ ಮಧ್ಯರಾತ್ರಿಯೇ ಮನ್ನತ್ ಮುಂದೆ ಬೀಡು ಬಿಡ್ತಾರೆ.
ಪ್ರತೀ ವರ್ಷವೂ ಇದೊಂದು ವಾಡಿಕೆ ರೀತಿಯೇ ನಡೆಯುತ್ತಿದ್ದು, ಈ ಬಾರಿ ಕೂಡ ಲಕ್ಷಾಂತರ ಮಂದಿ ಮನ್ನತ್ ಮುಂದೆ ನೆರೆದಿದ್ದರು, ಈ ಮಧ್ಯೆಯೇ 17 ಫೋನ್ ಕಳ್ಳತನವಾಗಿದೆ.
ಹೌದು, ಲಕ್ಷಾಂತರ ಮಂದಿಯ ನೂಕು ನುಗ್ಗಲಿನಲ್ಲಿ 17 ಮಂದಿ ಫೋನ್ ಕಳೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. 17 ಮಂದಿ ಮೊಬೈಲ್ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದಾರೆ.