ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಂಚೌಂಗ್ ಚಂಡಮಾರುತದಿಂದಾಗಿ ತಮಿಳುನಾಡು ಅಕ್ಷರಶಃ ನಲುಗಿಹೋಗಿದೆ. ಇದೀಗ ಆಂಧ್ರದ ಬಾಪಟ್ಲಾ ಸಮೀಪ ತೀರವನ್ನು ಚಂಡಮಾರುತ ತಾಕಿದ್ದು, ಪರಿಣಾಮವಾಗಿ ಕೋಸ್ತಾ ಆಂಧ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಕೆಲ ಊರುಗಳೇ ಜಲಾವೃತವಾಗಿದ್ದು, ಸಿಟಿಗಳಲ್ಲಿಯೂ ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುಮಲ ದೇಗುಲ ಜಲಮಯವಾಗಿದೆ, ಇನ್ನು ಕಾಳಹಸ್ತಿಗೂ ಜಲದಿಗ್ಭಂಧನವಾಗಿದೆ.
ಇದೀಗ ಚೆನ್ನೈ ಮೇಲೆ ಮಿಂಚೌಂಗ್ ಚಂಡಮಾರುತದ ಪರಿಣಾಮ ಕಡಿಮೆಯಾಗುತ್ತಿದ್ದು,ಕೆಲವು ಕಡೆ ಪ್ರವಾಹದ ಪರಿಸ್ಥಿತಿ ಮುಂದುವರಿದಿದೆ. ಇಂದು ಆಂಧ್ರ, ತಮಿಳುನಾಡು, ಒಡಿಶಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚೆನ್ನೈ ಹಾಗೂ ಆಂಧ್ರದ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಿಂಚೌಂಗ್ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದಲ್ಲಿಯೂ ಮಳೆ ಬೀಳುವ ಸಂಭವವಿದೆ. ಮೂರರಿಂದ-ನಾಲ್ಕು ದಿನ ಚಳಿಯ ವಾತಾವರಣ ಇರಲಿದೆ. ಅಷ್ಟೇ ಅಲ್ಲದೆ ಅಲ್ಲಲ್ಲಿ ಮಳೆಯಾಗುವ ಸಂಭವ ಇದೆ.